ರಾಷ್ಟ್ರ ಓಟದ ಸ್ಪರ್ಧೆಯಲ್ಲಿ ಜಿಲ್ಲೆಯ ತರುಣನಿಗೆ ತೃತೀಯ ಸ್ಥಾನ

ಕೂಡಿಗೆ ಕ್ರೀಡಾ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಿ.ವಿ. ದೀಕ್ಷಿತ್, ರಾಜ್ಯಮಟ್ಟದ 16 ವರ್ಷದೊಳಗಿನ 2ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾನೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದ ರಾಷ್ಟ್ರಮಟ್ಟದ 2 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ್ದಾನೆ. ಬಿ.ವಿ. ದೀಕ್ಷಿತ್, ಸೋಮವಾರಪೇಟೆ ಸಮೀಪದ ಕುಸುಬೂರು ಗ್ರಾಮ ಕೆಂಚಮ್ಮನಬಾಣೆ ನಿವಾಸಿ ವಸಂತ ಪೂಜಾರಿ-ಸುಭಾಷಿಣಿ ಅವರ ಪುತ್ರ.

error: Content is protected !!