ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಅವಘಡ: 30 ಪ್ರಯಾಣಿಕರು ಪಾರು

ಮಡಿಕೇರಿ ಹೊರವಲಯದ ಬೋಯಿಕೇರಿ ಬಳಿ ಪ್ರಯಾಣಿಕರಿದ್ದ ಸಾರಿಗೆ ಬಸ್ಸು ನಿಯಂತ್ರಣ ಕಳೆದುಕೊಂಡು ಚರಂಡಿಯೊಳಗೆ ಮಗುಚಿಕೊಂಡ ಘಟನೆ ನಡೆದಿದೆ.

ಮಡಿಕೇರಿ ಮೈಸೂರು ನಡುವಿನ ರಾಷ್ಟ್ಯೀಯ ಹೆದ್ದಾರಿ 275 ರಲ್ಲಿ ಸುಬ್ರಮಣ್ಯ ದಿಂದ ಮಡಿಕೇರಿ ಮೂಲಕ ಮೈಸೂರು ಕಡೆಗೆ ಸುಮಾರು 30 ಮಂದಿ ಪ್ರಯಾಣಿಕರು ತೆರಳುತ್ತಿದ್ದರು,ಏಕಿಏಕಿ ನಿಯಂತ್ರಣ ಕಳೆದುಕೊಂಡ ಬಸ್ಸು ಚಾಲಕನ ಸಮಯ ಪ್ರಜ್ಞೆಯಿಂದ ತಕ್ಷಣ ಬಾರೀ ಅನಾಹುತ ತಪ್ಪಿಸಿ ಚರಂಡಿಗೆ ಇಳಿಸಿದ್ದು,ಪಕ್ಕದ ಬರೆಗೆ ಒರಗಿಕೊಂಡಿದ್ದರ ಪರಿಣಾಮ ಹಿಂಬದಿಯ ಬಾಗಿಲು ಬಂದ್ ಆಗಿದ್ದು,ಬಳಿಕ ತುರ್ತು ನಿರ್ಗಮನ ಬಾಗಿಲ ಮೂಲಕ ಹೊರ ಬಂದಿದ್ದಾರೆ, ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸದೆ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.