fbpx

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ 8 ನೇ ತರಗತಿಗೆ ಪ್ರವೇಶ ಪರೀಕ್ಷೆ

ಜುಲೈ 2022 ನೇ ಅಧಿವೇಶನಕ್ಕೆ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ 8 ನೇ ತರಗತಿಯ ಪ್ರವೇಶ ಪರೀಕ್ಷೆಯು ಬೆಂಗಳೂರು ಕೇಂದ್ರದಲ್ಲಿ 2021 ರ ಡಿಸೆಂಬರ್, 18 ರಂದು ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು 2009 ರ ಜುಲೈ, 02 ರಿಂದ 2011ರ ಜನವರಿ, 01 ರೊಳಗೆ ಜನಿಸಿರುವ ಮಕ್ಕಳು ಭರ್ತಿ ಮಾಡಿರುವ ನಿಗದಿತ ಅರ್ಜಿ ನಮೂನೆ ದ್ವಿಪ್ರತಿಯಲ್ಲಿ 2021 ರ ಅಕ್ಟೋಬರ್, 05 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.080-25589459 ನ್ನು ಹಾಗೂ ವೆಬ್‍ಸೈಟ್ www.rimc.gov.in ನ್ನು ಹಾಗೂ ತಮ್ಮ ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!