ರಾಷ್ಟ್ರಮಟ್ಟದ ಥ್ರೋ ಬಾಲ್ ಪಂದ್ಯಾವಳಿಗೆ ಕೊಡಗಿನ ನಂದಿನಿ ಆಯ್ಕೆ

ರಾಷ್ಟ್ರಮಟ್ಟದ ಥ್ರೋ ಬಾಲ್ ಪಂದ್ಯಾವಳಿಗೆ ಕೊಡಗಿನ ಕುಶಾಲನಗರ ಸಮೀಪದ ನಂಜರಾಯಪಟ್ಟಣದ ನಂದಿನಿ.ಸಿ.ವಿ ಆಯ್ಕೆಯಾಗುವ ಮೂಲಕ ಕೊಡಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ನಂಜರಾಯ ಪಟ್ಟಣದ ವಾಸು.ಸಿ.ಎಂ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ ರಾಷ್ಟ್ರ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಪೆಡ್ ವ್ಯಾಸಂಗ ಮಾಡುತ್ತಿದ್ದಾರೆ.
ಹರಿಯಾಣ ರಾಜ್ಯದಲ್ಲಿ ನಡೆಯಲಿರುವ ಈ ಕ್ರೀಡಾಕೂಟವು, ಇದೇ ತಿಂಗಳ ೨೯ ರಿಂದ ೩೧ ರವರೆಗೆ ನಡೆಯಲಿದೆ. ಕ್ರೀಡಾಕೂಟವು ಹರಿಯಾಣದ ಎ.ಡಿ.ವಿ.ವಿ ಯಲ್ಲಿ ನಡೆಯಲಿದೆ.
ನಂದಿನಿ.ಸಿ.ವಿರವರಿಗೆ ಕೊಡಗಿನ ಜನತೆ ಅಭಿನಂದಿಸಿದ್ದಾರೆ. ಕೊಡಗು ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಆದಂ.ಎಸ್ ರವರು ನಂದಿನಿರವರಿಗೆ ಶುಭಾಶಯ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಕೊಡಗಿನ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

error: Content is protected !!