fbpx

ರಾಮ ಮಂದಿರದ ಕನಸಿಗೆ ಭದ್ರ ಬುನಾದಿ ಹಾಕಿದವರೇ ಬಿಜೆಪಿಯ ಭೀಷ್ಮ!

ಅಡ್ವಾಣಿ ಹುಟ್ಟುಹಬ್ಬಕ್ಕೆ ವಿಶೇಷ ಲೇಖನ

ಇಂದು ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯ ನಡೆಯುತ್ತಲೇ ಇದೆ. ನಮ್ಮ ದೇಶದ ಆಸ್ಮಿತೆಯ ಮಹತ್ತರ ಗುರುತಾಗಿ ಭವ್ಯವಾಗಿ ಕಟ್ಟಲಾಗುತ್ತಿದೆ. ರಾಮನಿಲ್ಲದೆ ರಾಮಾಯಣವಿಲ್ಲ. ರಾಮಾಯಣವಿಲ್ಲದೆ ಭಾರತವಿಲ್ಲ. ಹಾಗಾಗಿ ರಾಮನಿಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಅಂತಹ ರಾಮ ಜನ್ಮ ಭೂಮಿ, ರಾಮಮಂದಿರಕ್ಕೆ  ರಥ ಯಾತ್ರೆಯಂತಹ ಬೃಹತ್ ಆಂಧೋಲನವನ್ನು ಆರಂಭಿಸಿ ದೇಶವೇ ರಾಮ ಮಂತ್ರ ಜನತೆ ಸ್ಮರಿಸುವಂತೆ ಮಾಡಿದ ಅಡ್ವಾಣಿ ಅವರನ್ನು ಈ ದೇಶ ಮರೆಯಬಾರದು.

ದೇಶದಲ್ಲಿ ಹಿಂದುತ್ವದ ದೊಡ್ಡ ಕೇಸರಿ ಅಲೆಯನ್ನೇ ಎಬ್ಬಿಸಿ, ರಥಯಾತ್ರೆಯನ್ನು ಅಭಿಯಾನದಂತೆ ನಡೆಸಿದ ಬಿಜೆಪಿಯ ಭೀಷ್ಮರೆಂದೇ ಕರೆಯಲ್ಪಡುವ ಅಡ್ವಾಣಿ ಅವರು ರಾಷ್ಟ್ರದ ರಾಜಕೀಯದ ಇತಿಹಾಸದಲ್ಲಿ ಗುರುತ್ತರ ವ್ಯಕ್ತಿತ್ವ… ಅವರು ಹಾಗೆ ನಡೆಸಿದ ಅಭಿಯಾನದ ರೋಡ್ ಶೋಗಳಲ್ಲಿ ಕಿಕ್ಕಿರಿದು ತುಂಬುತ್ತಿದ್ದ ಜನಸ್ತೋಮ, ಅಲ್ಲಿ ಅವರು ಮಾಡುತ್ತಿದ್ದ ಪ್ರಭಾವಶಾಲಿ ಭಾಷಣಗಳು ಇಂದಿಗೂ ನೆನಪುಳಿಯುವಂತಹವು.

1990ರಲ್ಲಿ ಸೋಮನಾಥ ದೇವಾಲಯದಿಂದ ಶುರುವಾದ ರಾಮ ರಥಯಾತ್ರೆ ಅಯೋಧ್ಯೆಯ ತನಕ ಭರ್ಜರಿಯಾಗಿ ನಡೆದು ಭರಪೂರ ಜನ ಬೆಂಬಲವನ್ನು ಪಡೆಯಿತು. ವಿಶ್ವ ಹಿಂದೂ ಪರಿಷತ್(ವಿ.ಹೆಚ್.ಪಿ) ದಿವಂಗತ ನಾಯಕರಾದ ಅಶೋಕ್ ಸಿಂಗ್ಹಾಲ್ 1984ರಿಂದಲೇ ರಾಮ ಜನ್ಮ ಭೂಮಿಗೆ ಸಾಧುಗಳನ್ನು, ಹಿಂದೂ ಧಾರ್ಮಿಕ ಸಂಘಟನೆಗಳನ್ನು ಒಟ್ಟಾಗಿಸುವ ಕೆಲಸ ಮಾಡಿದರೆ, ಎಲ್.ಕೆ ಅಡ್ವಾಣಿ ಅವರು ರಾಮ ಮಂದಿರದ ನಿರ್ಮಾಣದ ಕನಸಿನ್ನು ದೇಶದ ಜನತೆಗೆ ಪ್ರಮುಖ ವಿಚಾರವಾಗಿ ಮನಸ್ಸಿನಲ್ಲಿ ಬಿತ್ತಿದ್ದರು.

ಒಂದು ತಿಂಗಳ ಕಾಲವಷ್ಟೇ ನಡೆದ ಅಭಿಯಾನವಾದರೂ ಮಿಂಚಿನ ಸಂಚಲನವನ್ನೇ ರಥಯಾತ್ರೆ ಎಂಬ ಆಂದೋಲನ ಉಂಟು ಮಾಡಿತ್ತು. 25 ಸೆಪ್ಟೆಂಬರ್ 1990ರಲ್ಲಿ ಶುರುವಾದ ರಾಮ ರಥಯಾತ್ರೆಯು 30 ಆಕ್ಟೋಬರ್ ವೇಳೆಗೆ ಕೊನೆಗೊಂಡಿತು. ಸುಮಾರು 300 ಕಿಲೋಮೀಟರ್ ದಿನವೊಂದಕ್ಕೆ ಕ್ರಮಿಸುತ್ತಿದ್ದ ಈ ಆಂದೋಲನದ ರಥ ಜನರನ್ನು ಬೃಹತ್ ಸಂಖ್ಯೆಯಲ್ಲಿ ಸೇರುವಂತೆ ಹಮ್ಮಿಕೊಳ್ಳಲಾಗಿತ್ತು. ಸುಮಾರು 6 ಸಾರ್ವಜನಿಕ ರಾಲಿಗಳನ್ನು ದಿನಕ್ಕೆ ಆಯೋಜಿಸಲಾಗುತ್ತಿತ್ತು. ತದ ನಂತರ ಬಿಹಾರದ ಲಾಲು ಪ್ರಸಾದ್ ಯಾದವ್ ಸರಕಾರ ಎಲ್.ಕೆ ಅಡ್ವಾಣಿ ಅವರನ್ನು ಬಂಧಿಸಿತ್ತು. ಅವರ 150,000 ಬೆಂಬಲಿಗರನ್ನು ಉತ್ತರ ಪ್ರದೇಶ ಸರಕಾರ ಸೆರೆ ಮನೆಗೆ ಸೇರಿಸಿತು. ಆಗ ದೊಡ್ಡ ಕೋಮು ಸಂಘರ್ಷವೇ ನಡೆದು ಹೋಯಿತು. ನೂರಾರು ಜನರು ಜೀವ ಕಳೆದುಕೊಂಡಿತು. ಆದರೂ ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲೂ ರಾಜ್ಯದಲ್ಲೂ ಬಿಜೆಪಿಗೆ ಬೆಂಬಲ ಸಿಕ್ಕಿತು.

ಇಂದು ಅಡ್ವಾಣಿ ಅವರ ಜನ್ಮ ದಿನಕ್ಕೆ ಕಾಣಲು ಪ್ರಧಾನಿ ಭೇಟಿ ನೀಡಿದ್ದರು.

ರಾಮ ರಥ ಯಾತ್ರೆಗೆ ಟೊಯೋಟಾ ಕಂಪಡನಿಯ ಹವಾ ನಿಯಂತ್ರಿತ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘದ ಕಾರ್ಯಕರ್ತರುಗಳು ಈ ಅಭಿಯಾನದಲ್ಲಿ ಉತ್ಸುಕರಾಗಿ ಭಾಗಿಯಾದರು. ಯಾತ್ರೆಯು ಒಟ್ಟು 10,000  ಕಿಲೋಮೀಟರ್ ಅಷ್ಟು ದೂರವನ್ನು ಸೋಮನಾಥ ದೇವಾಲಯದಿಂದ ಪ್ರಾರಂಭಿಸಿ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಮದ್ಯ ಪ್ರದೇಶ, ಬಿಹಾರ ರಾಜ್ಯಗಳನ್ನೆಲ್ಲಾ ದಾಟಿ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಕೊನೆಗೊಂಡಿತು.

ಹಿಂದೂ ಯುವ ಸಮೂಹ ರಾಮ ಮಂದಿರದ ನಿರ್ಮಾಣಕ್ಕೆ ರೊಚ್ಚಿಗೆದ್ದು ರೋಷದಿಂದ ಎಚ್ಚೆತ್ತಿತ್ತು. ಅಡ್ವಾಣಿ ಅವರಿಗೆ ತಲ್ವಾರ್, ಡ್ರಾಗರ್, ಬಿಲ್ಲು ಬಾಣ, ತ್ರಿಶೂಲವನ್ನೆಲ್ಲಾ ಉಡುಗೊರೆಯಾಗಿ ಅಭಿಮಾನದಲ್ಲಿ ನೀಡಿದ್ದರು. ಶಿವಸೇನೆ ನಾಯಕ ಬಾಲ್ ಠಾಕರೆ, ಬಿಜೆಪಿ ನಾಯಕ ಪ್ರಮೋದ್ ಮಹಾಜನ್, ಉಮಾಭಾರತಿ ಅವರೆಲ್ಲಾ ರಾಮ ಮಂದಿರದ ನಿರ್ಮಾಣಕ್ಕೆ ತವಕಿಸುತ್ತಿದ್ದರು.‌ ದೇಶದ ಮೂಲೆ ಮೂಲೆಗಳಿಂದ ಮಂದಿರದ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹದ ಜೊತೆಗೆ ಅಪಾರ ದೇಣಿಗೆ‌ ಹಣವನ್ನೂ ಜನತೆ ನೀಡಿದ್ದರು.

ಬಹಳ ರಂಪ, ರಭಸದಿಂದ ಶುರುವಾಗಿ ಮುಗಿದ‌ ರಾಮರಥ ಯಾತ್ರೆಯು 2004ರ ಲೋಕಸಭಾ ಚುನಾವಣೆಯಲ್ಲಿ ಇನ್ನೇನು ಅಡ್ವಾಣಿ ಅವರು ಪ್ರಧಾನಿ ಆಗಿಯೇ ಬಿಡುತ್ತಾರೆ ಎಂದು ದೇಶದ ಜನ ಊಹಿಸುತ್ತಿರುವಾಗಲೇ ಸೋಲನ್ನಪ್ಪಿತ್ತು ಬಿಜೆಪಿ.

ರಾಮರಥ ಯಾತ್ರೆಯಲ್ಲಿ

ಸೌಗಂಧ್ ರಾಮ್ ಕಿ ಕಥಾ ಹೈ, ಹಂ ಮಂದಿರ್ ವಹೀ ಬನಾಯೇಂಗೆ!

‘ಜಹಾ ರಾಮ್ ಕಾ ಜನ್ಮ ಹುವಾತಾ, ಹಂ ಮಂದಿರ್ ವಹೀ ಬನಾಯೇಗೆ!

‘ರಾಮ್ ಲಲ್ಲಾ ಹಂ ಆಯೇಂಗೆ, ಮಂದಿರ್ ವಹೀ ಬನಾಯೇಂಗೆ!

‘ಜೈ ಶ್ರೀರಾಮ್, ರಾಮ್ ನಾಮ್ ಸತ್ಯ ಹೇ’

ಎಂಬ ಘೋಷಣೆಗಳು ಮೊಳಗಿ ಹಿಂದುತ್ವದ ಕೇಸರಿ ಧ್ವಜಗಳು ರಾಷ್ಟ್ರದ ತುಂಬಾ ರಾರಾಜಿಸಿದವು. ಇಷ್ಟೆಲ್ಲಾ ಆದರೂ ರಾಮ ಮಂದಿರದ ನಿರ್ಮಾಣ ಕಾರ್ಯ ಈ ವರ್ಷ ಆರಂಭವಾಗಿದ್ದು, ವಿಳಂಬವೇ ಆಗಿತ್ತು. ರಾಮನ ಮಂದಿರದ ವಿಚಾರ ಕಾನೂನು ಸಂಘರ್ಷದ ಅಡ್ಡಿಯಿಂದ ಇಷ್ಟು ದಶಗಳಾದ ಮೇಲೆ ನನಸಾಗುತ್ತಿರುವುದು ಬೇಸರದ ವಿಚಾರ..!

error: Content is protected !!