fbpx

ರಾಮ ಮಂದಿರದ ಅಡಿಪಾಯಕ್ಕೆ ಮೊದಲ ಕಲ್ಲು ಇರಿಸಿದ್ದು ಒಬ್ಬ ‘ದಲಿತ ಕರ ಸೇವಕ’

ರಾಮ ಮಂದಿರ ಭೂಮಿ ಪೂಜೆ ವಿಶೇಷ

ಹಿಂದೂ ಧರ್ಮದಲ್ಲಿ ಮೇಲು ಕೀಳು ತಾರತ್ಯವಿದೆ, ಬೇಧ ಭಾವವಿದೆ ಎಂದೆಲ್ಲಾ ಕೆಲವರು ಪೂರ್ವಾಗ್ರಹ ಪೀಡಿತರ ಹಾಗೆ ಯಾವ್ಯಾವುದೋ ಅಜೆಂಡಾಗಳಿಗೆ‌ಜೋತು ಬಿದ್ದು ಅರಚಿಕೊಳ್ಳುತ್ತಾರೆ. ಆದರೆ ಅಂತಹವರು ರಾಮಮಂದಿರದ ಅಡಿಪಾಯಕ್ಕೆ ಮೊದಲ ಅಡಿಕಲ್ಲು ಇರಿಸಿದ್ದು ಒಬ್ಬ ದಲಿತ ಆರ್.ಎಸ್.ಎಸ್ ಸ್ವಯಂ ಸೇವಕ ಎಂಬುದನ್ನು ಮನ ಕಾಣಬೇಕು…!

ಕಾಮೇಶ್ವರ್ ಛೌಪಲ್

ಹಾಗೆ ರಾಮಮಂದಿರದ ಅಡಿಪಾಯದ ಮೊದಲ ಅಡಿಗಲ್ಲು ಇರಿಸಿದ್ದು ‘ದಲಿತ ಕರ ಸೇವಕ’ರಾದ ‘ಕಾಮೇಶ್ವರ್ ಛೌಪಲ್’. ನವೆಂಬರ್ 9, 1989ರಂದು ಅಡಿಪಾಯಕ್ಕೆ ಮೊದಲ ಕಲ್ಲನ್ನು ವಿಶ್ವ ಹಿಂದೂ ಪರಿಷತ್ ನಾಯಕರ ಸಮ್ಮುಖದಲ್ಲಿ ಇರಿಸಿದ್ದರು.

ಆರ್.ಎಸ್.ಎಸ್ ಹಾಗು ವಿಶ್ವ ಹಿಂದೂ ಪರಿಷತ್ ಲಾಂಛನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂ ಸೇವಕರಾಗಿ ಜಿಲ್ಲಾ ಪ್ರಚಾರಕರಾಗಿ ಮದುಬನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿಗಳಾಗಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಈಗ ಪ್ರಸ್ತುತ ಇವರು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ನೂತನ ಸದಸ್ಯರಾಗಿ  ಕಾರ್ಯೋನ್ಮುಕರಾಗಿದ್ದಾರೆ.

ಅಶೋಕ್ ಸಿಂಗ್ಹಾಲ್

ಕಾಮೇಶ್ವರ್ ಛೌಪಲ್ ಅಶೋಕ್ ಸಿಂಗ್ಹಾಲ್ ಅವರೊಂದಿಗೆ ಆತ್ಮೀಯ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ‘ಅಶೋಕ್ ಸಿಂಗ್ಹಾಲ್‌ ಅವರು ಕೊನೆ ಉಸಿರೆಳೆಯುವಾಗಲೂ ಪುನಃ ಪುನಃ ‘ರಾಮ ಜನ್ಮ ಭೂಮಿ, ರಾಮ್ ಕಿ ಜೈ’ ಎಂದು ಹೇಳಿ ನವೆಂಬರ್ 17, 2015ರಂದು ಅಸುನೀಗಿದ್ದರು‌.’ ದೆಹೆಲಿಯಲ್ಲಿ ಹಾಗೆ ಅಶೋಕ್ ಸಿಂಗ್ಹಾಲ್ ಅವರು ತೀರಿ ಹೋದಾಗ ಜೊತೆಗಿದ್ದವರು ಕಾಮೇಶ್ವರ್ ಛೌಪಲ್

ಇವರು 1991 ಹಾಗು 1995ರಲ್ಲಿ ಬಿಹಾರ್ ಅಸೆಂಬ್ಲಿಯಿಂದ ಸ್ಪರ್ಧಿಸಿ, ಪರಾಭವ ಹೊಂದಿದರು. 2002ರಲ್ಲಿ ಮತ್ತೆ ಎಂ.ಎಲ್.ಸಿ ಸ್ಥಾನಕ್ಕೆ ಚುನಾವಣೆಲಿ ನಿಂತು ಚುನಾಯಿಸಿ ಗೆದ್ದಿದ್ದರು‌. ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರದ ಅಡಿಪಾಯಕ್ಕೆ ಮೊದಲ ಕಲ್ಲು ಇರಿಸಿದ್ದನ್ನು ನೆನೆದು ಭಾವುಕರಾಗುವ ಅವರು ‘ರಾಮ ಮಂದಿರದ ನಿರ್ಮಾಣದ ಮೂಲಕ ಭಾರತದಲ್ಲಿ ಹಿಂದುಗಳೆಲ್ಲಾ ಸಮಾನರು ಎಂಬ ಪ್ರತಿಷ್ಠೆ ಬರಲಿದೆ‌. ಎಲ್ಲಾ ತಾರತಮ್ಯಗಳೂ ಕೊನೆಯಾಗಲಿದೆ‌’ ಎಂದು ಆಶಾಭಾವನೆ ವ್ಯಕ್ತ ಪಡಿಸುತ್ತಾರೆ.

ಏನೇ ಇರಲಿ ಎಡ ಪಂಥೀಯರು ಬಿಜೆಪಿ, ಆರ್.ಎಸ್ಎಸ್ ಕೇವಲ ಸವರ್ಣೀಯರಿಗೆ ಮಣೆ ಹಾಕುತ್ತದೆ ಎಂದು ಆರೋಪಿಸುತ್ತವೆ. ಆದರೆ ರಾಮ ಮಂದಿರಕ್ಕೆ ಅಡಿಗಲ್ಲು ಇರಿಸಿದ್ದು ಒಬ್ಬ ದಲಿತ ಆರ್.ಎಸ್.ಎಸ್ ಸ್ವಯಂ ಸೇವಕ ಎಂಬುದನ್ನು ಮೊದಲು ಗಮನಿಸಬೇಕು.

ಸಂಗ್ರಹ ಮಾಹಿತಿ ಆಧಾರಿತ ಲೇಖನ

ಸಂಪಾದಕರು, ಸುದ್ದಿ ಸಂತೆ

error: Content is protected !!