fbpx

ರಾಮೇಶ್ವರಮ್ ಎಂಬ….

✍ ದೀಪಕ್ ಶರ್ಮಾ,

ಭಾರತ ದೇಶದ ಸಮುದ್ರ ನಗರಗಳಲ್ಲಿ ಒಂದಾದ ರಾಮೇಶ್ವರವು , ಇತಿಹಾಸ ಪ್ರಸಿದ್ಧ ಸ್ಥಳ.
ತ್ರೇತಾಯುಗದಲ್ಲಿ ಶ್ರೀರಾಮನು ಇಲ್ಲಿ ಗಣೇಶನಿಗೆ ಪೂಜೆ ಮಾಡಿ ನಂತರ ರಾವಣನ ಸಂಹಾರಕ್ಕಾಗಿ ಲಂಕೆಗೆ ಹೋಗುವುದಕ್ಕಾಗಿ ಸೇತುವೆ ನಿರ್ಮಾಣ ಮಾಡಿದ್ದನೆಂದು ಹೇಳಲಾಗಿದೆ.


ನಂತರ ರಾವಣನನ್ನು ಸಂಹರಿಸಿ, ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಇಲ್ಲಿಗೆ ಆಗಮಿಸಿ , ಮಹಾಬ್ರಾಹ್ಮಣನಾದ , ರಾವಣನನ್ನು ಕೊಂದ ಬ್ರಹ್ಮಹತ್ಯಾ ದೋಷದ ಪರಿಹಾರಕ್ಕೆ , ಇಲ್ಲಿ ಶಿವನ ಲಿಂಗವನ್ನು ಸ್ಥಾಪಿಸಿದನಂತೆ. ಅದನ್ನು ರಾಮನಾಥ ಸ್ವಾಮಿ ರಾಮೇಶ್ವರ ದೇವಾಲಯ ಒಂದು ಬೃಹತ್ ದೇವಾಲಯವಾಗಿದ್ದು , ಭಕ್ತರು , ಇಲ್ಲಿರುವ 27 ಬಾವಿಗಳಲ್ಲಿ ಪುಣ್ಯ ಸ್ನಾನ ಮಾಡಿದ ನಂತರ ದೇವರ ದರ್ಶನಕ್ಕೆ ತೆರಳುತ್ತಾರೆ.

ಈ 27 ಬಾವಿಗಳು , 27 ನಕ್ಷತ್ರಗಳನ್ನು ಪ್ರತಿನಿಧಿಸುತ್ತದೆಯಂತೆ.. ಆ ಕಾರಣದಿಂದ ಯಾರಿಗೇ ನಕ್ಷತ್ರ ದೋಷವಿದ್ದರೆ , ಇಲ್ಲಿಯ ಬಾವಿಗಳಲ್ಲಿನ ನೀರಿನ ಸ್ನಾನ ದಿಂದ ದೋಷ ಪರಿಹಾರ ಆಗುತ್ತದೆಂಬ ನಂಬಿಕೆ ಇದೆ. ಶಿವಲಿಂಗವನ್ನು , ಸೀತಾಮಾತೆಯು , ಮರಳಿನಿಂದ ಮಾಡಿ ಶ್ರೀರಾಮನಿಗೆ ಕೊಟ್ಟಾಗ , ಶ್ರೀ ರಾಮನು ಪ್ರತಿಷ್ಟಾಪನೆ ಮಾಡಿ ಪೂಜಿಸಿದನಂತೆ. ಆ ಕಾರಣದಿಂದಾಗಿ ಇದಕ್ಕೆ ರಾಮೇಶ್ವರ ಎಂಬ ಹೆಸರು ಬಂದಿದೆ.

ಇಲ್ಲಿ ಬಹು ವಿಶೇಷವಾದ ಸ್ಫಟಿಕದ ಲಿಂಗವೂ ಇದ್ದು , ಪ್ರತಿದಿನ ಬೆಳಿಗೆ ಐದು ಗಂಟೆಯಿಂದ ಆರು ಗಂಟೆ ವರೆಗೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ವಿರುತ್ತದೆ.. ಸ್ಫಟಿಕದ ಲಿಂಗದ ದರ್ಶನ ಪಡೆಯಲು , ಭಕ್ತಾದಿಗಳು ಬೆಳಗಿನ ಜಾವ ಮೂರು ಗಂಟೆಗೆ ಆಗಮಿಸಿ , ಸರತಿಯ ಸಾಲಿನಲ್ಲಿ ನಿಂತಿರುತ್ತಾರೆ..


ರಾಮೇಶ್ವರದ ಹತ್ತಿರದಲ್ಲೇ ಧನುಷ್ಕೋಟಿ ಯಲ್ಲಿ ರಾಮರು ವಾನರ ಸೇನೆಯ ನೆರವಿನಿಂದ ಲಂಕೆಗೆ ಸೇತುವೆ ಕಟ್ಟಿದ ಸ್ಥಳವಿದೆ. ರಾಮೇಶ್ವರ ಕ್ಕೆ ಬರುವ ಪ್ರತಿಯೊಬ್ಬ ಭಕ್ತ ರೂ , ಧನುಷ್ಕೋಟಿಗೆ ಅವಶ್ಯವಾಗಿ ಬರುತ್ತಾರೆ…
ರಾಮೇಶ್ವರ ಇನ್ನೊಂದು ವಿಷಯಕ್ಕೂ ಪ್ರಸಿದ್ದಿ ಪಡೆದಿದೆ.. ಅದು ವಿಶ್ವವಿಖ್ಯಾತ ವಿಜ್ಞಾನಿಗಳು , ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರ ಜನ್ಮಸ್ಥಳವೂ ಆಗಿರುವುದು ವಿಶೇಷ.


ಅಷ್ಟೇ ಅಲ್ಲದೇ , ಇಲ್ಲಿರುವ #ಪಂಬನ್_ಸೇತುವೆ ಆಕರ್ಷಣೀಯವಾಗಿದೆ. ಸಮುದ್ರದಲ್ಲಿ ಕಟ್ಟಿರುವ ಈ ರೇಲ್ವೆ ಸೇತುವೆ , ಹಡಗುಗಳು ಹತ್ತಿರ ಬಂದಾಗ ತೆರೆದುಕೊಳ್ಳುವುದು ನೋಡುವುದೇ ಅಚ್ಛರಿಯ ದೃಶ್ಯ.,

ರಾಮೇಶ್ವರ ದಲ್ಲಿ ನೋಡಬಹುದಾದ ಇನ್ನಿತರ ಸ್ಥಳಗಳು..

ಕೋದಂಡರಾಮ ಸ್ವಾಮಿ ದೇವಸ್ಥಾನ.. ಇದು ಐನೂರು ವರ್ಷಗಳ ಹಿಂದೆ ನಿರ್ಮಾಣವಾಗಿದೆ.

ಪಂಚಮುಖಿ ಆಂಜನೇಯ ದೇವಸ್ಥಾನ.

ಅಗ್ನಿತೀರ್ಥ.

ರಾಮನಾಥೇಶ್ವರ ದೇವಸ್ಥಾನ.

ದೀಪಕ್ ಶರ್ಮಾ,
ಅರ್ಚಕರು, ಹವ್ಯಾಸಿ ಬರಹಗಾರರು

error: Content is protected !!