ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣವಾಗುವುದಾದರೆ, ಕೃಷ್ಣ ಜನ್ಮ ಭೂಮಿಯಲ್ಲೇಕೆ ಮಂದಿರವಿಲ್ಲ…!

ಅಯೋಧ್ಯೆ ವಿವಾದಕ್ಕೆ ಸಿಕ್ಕ ಮನ್ನಣೆ ಮಥುರಾಗೆ ಏಕಿಲ್ಲ?
ರಜತ್ ರಾಜ್ ಡಿ.ಹೆಚ್, ಸಂಪಾದಕರು
ಅದು ಆಗ ಇಸವಿ 1669-70. ಇಸ್ಲಾಂ ಕೋಮುವಾದಿ ಮೊಗಲ್ ದೊರೆ ಔರಂಗಜೇಬ್ ಕೇಶವನಾಥ ಹಿಂದೂ ದೇವಾಲಯವನ್ನು ಕೆಡವಿ ಅದರ ಜಾಗದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ಕಟ್ಟಿದ. 17ನೇ ಶತಮಾನದಲ್ಲಿ ಈ ಮಸೀದಿಯನ್ನು ದೇವಸ್ಥಾನವನ್ನು ಧ್ವಂಸಗೊಳಿಸಿ ನಿರ್ಮಿಸಲಾಯಿತು.

ಮೊಗಲರ ಪೈಕಿ ಅತ್ಯಂತ ಮತಾಂಧ ದೊರೆಯಾಗಿದ್ದ ಔರಂಗಜೇಬ್ ತೀರಾ ವಿಕೃತ ಹಾಗು ಕೋಮುವಾದಿ ಮನಸ್ಥಿತಿ ಹೊಂದಿದವನಾಗಿದ್ದ ಎಂದು ಇತಿಹಾಸದ ಪುಟಗಳು ಸ್ಪಷ್ಟಪಡಿಸುತ್ತವೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬೇಕೆಂದೆ ಇಂತಹ ಕೃತ್ಯಗಳನ್ನು ಎಸಗುತ್ತಿದ್ದ ಅವನು ಬಹಳ ನಿಶ್ಕರುಣಿ ದೊರೆಯಾಗಿದ್ದ.
ಹಾಗೆ ಅಂದು ಇತಿಹಾಸದಲ್ಲಿ ಕೃಷ್ಣ ಜನ್ಮ ಸ್ಥಳ ಎನ್ನಲಾಗುವ ಸ್ಥಳದಲ್ಲಿ ಈಗ ಈದ್ಗಾ ಮಸೀದಿ ಇದೆ. ಮಸೀದಿಯನ್ನು ತೆರವುಗೊಳಿಸಿ, ಕೃಷ್ಣ ಜನ್ಮ ಭೂಮಿಯನ್ನು ನಿರ್ಮಿಸುವುದಕ್ಕೆ ಖಾಲಿ ಮಾಡಬೇಕೆಂದು ಆರು ಮಂದಿ ಹಿಂದೂಗಳು ಮಥುರಾ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಅದನ್ನು ಸೆಪ್ಟೆಂಬರ್ 30ರಂದು ತಿರಸ್ಕರಿಸಿತ್ತು ನ್ಯಾಯಾಲಯ. ಆದರೆ ಅದರ ವಿಚಾರಣೆ ಮತ್ತೆ ನವೆಂಬರ್ 18ರಿಂದ ಮತ್ತೆ ಶುರುವಾಗಲಿದೆ. ಈ ದಾವೆಯ ವಕೀಲರಾದ ಹರಿಶಂಕರ್ ಹಾಗು ವಿಷ್ಣು ಶಂಕರ್ ಜೂನ್ ಅರ್ಜಿದಾರರ ಪರವಾಗಿ ಈದ್ಗಾ ಮಸೀದಿ ಟ್ರಸ್ಟ್ ಹಾಗು ಸುನ್ನಿ ವಕ್ಫ್ ಬೋಡ್೯ ಆಡಳಿತದ ಅಡಿಯಲ್ಲಿ ಇರು ಮಸೀದಿಯನ್ನು ತೆರವುಗೊಳಿಸಿ, 13.37 ಎಕರೆ ಜಾಗವನ್ನು ಖಾಲಿ ಮಾಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
1968ರಲ್ಲಿ ಶ್ರೀ ಕೃಷ್ಣ ಜನ್ಮ ಸ್ಥಾನ ಸೇವಾ ಸಂಸ್ಥಾನ ಹಾಗು ಈದ್ಗಾ ನಿರ್ವಹಣಾ ಕಮಿಟಿ ಒಪ್ಪಂದ ಮಾಡಿಕೊಂಡು, ಮಸೀದಿ ಇರುವಲ್ಲೇ ಇರಲಿದೆ ಎಂಬ ಒಪ್ಪಿಗೆಗೆ ಬರಲಾಗಿತ್ತು. ಆದರೆ ಆ ವಾದವೀಗ ಕಾನೂನು ಬಾಹೀರವೆಂದು ಹೇಳಲಾಗುತ್ತಿದೆ.
ಹಾಗೆ ಹೇಳಿದ್ದೇಕೆ ಗೃಹ ಸಚಿವ ಅಮಿತ್ ಶಾ?

ಇತ್ತೀಚೆಗೆ ಅಮಿತ್ ಶಾ ಅವರು ‘ರಾಮ ಮಂದಿರ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿತ್ತು ಆದರೆ ಕೃಷ್ಣ ಜನ್ಮ ಭೂಮಿಯ ವಿಚಾರದಲ್ಲಿ ಕೇಂದ್ರ ಸರಕಾರ ಹಾಗು ಬಿಜೆಪಿ ತಲೆ ಹಾಕುವುದಿಲ್ಲ’ ಎಂದು ಹೇಳಿದ್ದರು. ಇದು ಅಸಂಖ್ಯಾತ ಕೃಷ್ಣ ಭಕ್ತರಿಗೆ ನಿರಾಶೆ ಹಾಗು ಆಶ್ಚರ್ಯ ಮೂಡಿಸಿತ್ತು.
ಕೃಷ್ಣ ಜನ್ಮ ಸ್ಥಾನಕ್ಕೆ ಏಕಿಲ್ಲ ಮನ್ನಣೆ?
ಅಯೋಧ್ಯೆಯಲ್ಲಿ ಹೇಗೆ ಬಾಬರನು ರಾಜ್ಮ ಭೂಮಿಯಲ್ಲಿ ಬಾಬರಿಮಸೀದಿ ಕಟ್ಟಿದ್ದನೋ ಅದೇ ರೀತಿ ಮಥುರಾದಲ್ಲೂ ದೇವಸ್ಥಾನವನ್ನು ಕೆಡವಿಯೇ ಔರಂಗಜೇಬ್ ಕೃಷ್ಣ ಜನ್ಮ ಭೂಮಿಯಲ್ಲಿ ಈದ್ಗಾ ಮಸೀದಿ ಕಟ್ಟಿದ್ದ. ಆದರೂ ಎನ್.ಡಿ.ಎ ಸರಕಾರ ಹಾಗೇ ಬಿಜೆಪಿ ಈ ವಿವಾದದಿಂದ ದೂರ ಸರಿದಿದ್ದು ಯಾಕಾಗಿ? ಅದರ ಹಿಂದೆ ಬಲವಾದ ಕಾರಣವಿದೆ. ಅದೇನೆಂದರೆ ರಾಮಮಂದಿರ ಸಂಬಂಧಿಸಿದಂತೆ ಈ ದೇಶದಲ್ಲಿ ರಥಯಾತ್ರೆಯಂತಹ ದೊಡ್ಡ ಆಭಿಯಾನವೇ ನಡೆದಿತ್ತು. ಆದರೆ ಅಂತಹ ಅಭಿಯಾನವೇನೂ ಕೃಷ್ಣ ಮಂದಿರಕ್ಕೆ ಆಗಿಲ್ಲ. ಅದರೊಂದಿಗೆ ರಾಮ ಮಂದಿರ ಅಜೆಂಡಾದಿಂದ ಬಿಜೆಪಿಗೆ ದೊಡ್ಡ ಓಟ್ ಬ್ಯಾಂಕ್ ಸಂಗ್ರಹವಾಗುತ್ತದೆ. ಆದರೆ ಕೃಷ್ಣ ಮಂದಿರದಿಂದ ಅಷ್ಟರ ಮಟ್ಟಿಗೆ ಲಾಭವಾಗುವುದಿಲ್ಲ. ಹಾಗಾಗಿ ಲಾಭವಿಲ್ಲದೆ ಇರುವುದರಿಂದ ಬಿಜೆಪಿ ಕೃಷ್ಣ ಜನ್ಮ ಭೂಮಿ ವಿಚಾರದಲ್ಲಿ ಸುಮ್ಮನಾಗಿದೆ ಎಂದು ಹೇಳಲಾಗುತ್ತಿದೆ.
ದೊರೆ ವಾಸುದೇವ ಹಾಗು ರಾಣಿ ದೇವಕಿಯ ಸುಪುತ್ರನಾಗಿ ಜನಿಸಿದ ಶ್ರೀ ಕೃಷ್ಣನು ಲೋಕೋದ್ಧಾರಕನು, ಜಗದ್ಗುರುವೂ ಹೌದು. 3200 ರಿಂದ 3100 B.C ಅವಧಿಯಲ್ಲಿ ಶ್ರೀ ಕೃಷ್ಣನು ಜನ್ಮ ತಾಳಿದ್ದ. ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಭಗವದ್ಗೀತೋಪದೇಶ ಜೀವನಕ್ಕೆ ಜ್ಯೋತಿ ಆಗುವಂತಹದ್ದು. ಹಿಂದೂಗಳ ಅತೀ ಪೂಜನೀಯ ದೈವವಾದ ಶ್ರೀ ಕೃಷ್ಣ ಪರಮಾತ್ಮನ ಜನ್ಮ ಭೂಮಿಯೂ ಕಲಿಯುಗದ ಮತಾಂಧ ದೊರೆ ಮೊಗಲ್ ಅರಸ ಔರಂಗಜೇಬ್ ಕೇಶವನಾಥ ದೇವಸ್ಥಾನವನ್ನು ಕೆಡವಿ ಈದ್ಗಾ ಮಸೀದಿ ಕಟ್ಟಿ, ವಿವಾದಾತ್ಮಕವಾಗಿಸಿದ್ದು, ವಿಪರ್ಯಾಸ…