ರಾಫ್ಟಿಂಗಿನಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೂಚನೆ

ಕುಶಾಲನಗರ ತಾಲ್ಲೂಕಿನಲ್ಲಿ ಸಾಹಸಕ್ರೀಡೆಗೆ ಹೆಸರುವಾಸಿಯಾಗಿರುವ ದುಬಾರೆಯ ರಿವರ್ ರಾಫ್ಟಿಂಗ್ ನಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ,ಮತ್ತು ಸೌಲಭ್ಯಗಳು ಒದಗಿಸುವಂತೆ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೂಚಿಸಿದ್ಧಾರೆ.
ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ರಾಫ್ಟಿಂಗ್ ಆಗಮಿಸುವ ವೇಳೆ ಟಿಕೇಟ್ ಕೌಂಟರ್, ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ವಾಹನ ನಿಲುಗಡೆ ಸೇರಿದಂತೆ.ರಾಫ್ಟಿಂಗ್ ತೆರಳುವ ಪ್ರವಾಸಿಗರಿಗೆ ಸಸ್ಸಜ್ಜಿತ ಬೋಟ್ ಸುರಕ್ಷಾ ಕವಚ ಒದಗಿಸುವುದು, ಅಪಾಯ ಸಂದರ್ಭಕ್ಕೆ ತಕ್ಕ ನುರಿತ ಈಜು ಮತ್ತು ಮುಳುಗು ತಜ್ಞರು ಇರಬೇಕು ಎಂದರು. ಸದ್ಯ ದುಬಾರೆಯಲ್ಲಿ 65 ಬೋಟುಗಳನ್ನು 8 ಹೆಚ್ಚುವರಿ ಬೋಟ್ ಕಾರ್ಯನಿರ್ವಹಿಸುತ್ತಿದೆ ಇದೀಗ ಮತ್ತೊಂದು ಬೋಟ್ ಸೇರ್ಪಡೆಯಾಗಿದೆ.