fbpx

ರಾಜ್ಯ ಹೆದ್ದಾರಿ ಕಾಮಗಾರಿಗೆ ಗುದ್ದಲಿಪೂಜೆ

ಬಹುಬೇಡಿಕೆಯ ಮೈಸೂರಿನ ಹುಣಸೂರು-ತಲಕಾವೇರಿ 21.70 ಕಿಲೋಮೀಟರ್ ರಾಜ್ಯ ಹೆದ್ದಾರಿಯ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿತು.

ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ 23 ಕೋಟಿ ವೆಚ್ಚದ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದರು. ರಾಜ್ಯ ಹೆದ್ದಾರಿಯ ಆನೆಚೌಕೂರು ಗೇಟ್ ನಿಂದ ಆರಂಭಗೊಂಡು, ಮಜ್ಜಿಗೆಹಳ್ಳ, ಗೋಣಿಕೊಪ್ಪ ಉಮಾಮಹೇಶ್ವರ ದೇವಾಲಯ, ವಿರಾಜಪೇಟೆ ಮತ್ತು ಕೊಣನೂರು, ಮಾಕುಟ್ಟ ರಾಜ್ಯ ಹೆದ್ದಾರಿ, ವಿರಾಜಪೇಟೆ ಪೊಲೀಸ್ ಠಾಣೆಯ ಮುಂಭಾಗ ದಿಂದ ಪೆರುಂಬಾಡಿ ಗೇಟ್ ವರೆಗೆ ಈ ಕಾಮಗಾರಿ ನಡೆಯಲಿದೆ.

ಎಸ್.ಎಚ್.ಡಿ.ಪಿ ಅನುಧಾನದಲ್ಲಿ ಮರು ಡಾಂಬರೀಕರಣ ನಡೆಯಲಿದ್ದು, ಗೋಣಿಕೊಪ್ಪದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

error: Content is protected !!