ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಗುಡ್ ನ್ಯೂಸ್ : ಸಹಕಾರ ಬ್ಯಾಂಕ್ ಗಳ ಅಲ್ಪಾವಧಿ ‘ಬೆಳೆ ಸಾಲ ಮನ್ನಾ’ಗೆ ಹಣ ಬಿಡುಗಡೆ

ಬೆಂಗಳೂರು : ರಾಜ್ಯದ ರೈತರು ಸಹಕಾರ ಸಂಘ, ಸಹಕಾರ ಬ್ಯಾಂಕ್ ಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ 10-07-2018ಕ್ಕೆ ಹೊಂದಿರುವ ಹೊರಬಾಕಿಯನ್ನು ಗರಿಷ್ಠ 1 ಲಕ್ಷದವರೆಗಿನ ಸಾಲದ ಮೊತ್ತವನ್ನು ಮನ್ನಾದ ಹಣ ಬಿಡುಗಡೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ಸಹಕಾರ ಸಂಘಗಳ ನಿಬಂಧಕರಾದಂತ ಎಸ್ ಜಿಯಾಉಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದು, 1 ಲಕ್ಷಗಳ ಸಾಲ ಮನ್ನಾ ಯೋಜನೆಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಷದಿಂದ 65,543 ರೈತರಿಗೆ ಸಂಬಂಧಿಸಿದಂತೆ ರೂ.350.16 ಕೋಟಿಗಳ ಹಸಿರು ಪಟ್ಟಿ ನೀಡಿದ್ದು, ಅದರ ಪಟ್ಟಿಯನ್ನು ಎಕ್ಸ್ ಎಲ್ ಶೀಟ್ ನಲ್ಲಿ ಈಗಾಗಲೇ ನೀಡಿದ್ದು, ಇದರಲ್ಲಿ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿದ್ದ ರೂ.55.01 ಕೋಟಿಗಳ ಮೊತ್ತವನ್ನು ಗಡುವು ದಿನಾಂಕದ ಆಧಾರವಾಗಿ NEFT ಮೂಲಕ ಅನುದಾನ ಬಿಡುಗಡೆ ಮಾಡಲು ಉಲ್ಲೇಖ 2ರಲ್ಲಿ 8,313 ರೈತರ ಪಟ್ಟಿ ನೀಡಲಾಗಿತ್ತು.
ಉಲ್ಲೇಖ-3ರಲ್ಲಿ ಸರ್ಕಾರ ಬಾಕಿ ಇರುವ 57,229 ರೈತರಿಗೆ ಅನುದಾನ ಬಿಡುಗಡೆ ಮಾಡಲು ಅಯವ್ಯಯದಲ್ಲಿ ಲಭ್ಯವಿದ್ದು, ರೂ.260.41 ಕೋಟಿಗಳನ್ನು ಬಿಡುಗಡೆ ಮಾಡಿ, ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ ರೂ.34.73 ಕೋಟಿಗಳನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ್ದು, ಒಟ್ಟಾರೆ ರೂ.295.14 ಲಕ್ಷಗಳನ್ನು ಬಿಡುಗಡೆ ಮಾಡಿ ಸಾಲ ಮನ್ನಾ ಯೋಜನೆಯನ್ನು ಇದೇ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಲು ಸೂಚಿಸಲಾಗಿದೆ.

ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಸರ್ಕಾರ ಅಯವ್ಯಯದ ಅವಕಾಶದಲ್ಲಿ ಸದ್ಯ ಬಿಡುಗಡೆ ಮಾಡಿರುವ ರೂ.260.41 ಕೋಟಿಗಳ ಜೊತೆಯಲ್ಲಿ ರೂ.1 ಲಕ್ಷಗಳ ಸಾಲ ಮನ್ನಾ ಯೋಜನೆಯಲ್ಲಿ ಜಮಾ ಆಗಿರುವ ಬಡ್ಡಿ ಮತ್ತು ಸಹಕಾರ ಸಂಘಗಳು ಪಾವತಿಸಿರುವ ಮೊತ್ತ ರೂ.23.78 ಕೋಟಿ ಮತ್ತು ರೂ.50,000ಗಳ ಸಾಲ ಮನ್ನಾ ಯೋಜನೆಯಲ್ಲಿ ಸಹಕಾರ ಸಂಘಗಳು ವಾಪಸ್ ಜಮಾ ನೀಡಿ, ಠೇವಣಿ ಇರಿಸಿದ್ಧ ಮೊತ್ತ ರೂ.10.95 ಕೋಟಿಗಳನ್ನು ಅವಧಿ ಪೂರ್ಣ ಪಕ್ವ ಗೊಳಿಸಿ, ಅನುಬಂಧ-1ರಲ್ಲಿ ಕಾಣಿಸಿದ 57,229 ರೈತರ ಉಳಿತಾಯ ಖಾತೆಗಳಿಗೆ ರೂ.295.14 ಕೋಟಿಗಳನ್ನು NEFT ಮೂಲಕ ಕೂಡಲೇ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಅಪೆಕ್ಸ್ ಬ್ಯಾಂಕಿನಲ್ಲಿ ಸಾಲ ಮನ್ನಾ ಯೋಜನೆಯಲ್ಲಿ ಉಳಿಯುವ ಮೊತ್ತವನ್ನು ಬಡ್ಡಿಯೊಂದಿಗೆ 15 ದಿನಗಳ ಅವಧಿಗೆ ಠೇವಣಿ ಮಾಡಿ, ಈ ಕಚೇರಿಯ ಆದೇಶದ ವರೆಗೆ ನವೀಕರಿಸಲು ಸೂಚಿಸಲಾಗಿದೆ.

error: Content is protected !!