ರಾಜ್ಯ ಸರ್ಕಾರದಿಂದ ಅಶ್ವಿನಿ ಪೊನ್ನಪ್ಪರಿಗೆ 15 ಲಕ್ಷ ಪ್ರೋತ್ಸಾಹ ಧನ

ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತೆ ಕೊಡಗಿನ ಅಶ್ವಿನಿ ಪೂನ್ನಪ್ಪರಿಗೆ ರಾಜ್ಯ ಸರ್ಕಾರದ ವತಿಯಿಂದ ರೂ.15 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ.
ಅಶ್ವಿನಿ ಪೊನ್ನಪ್ಪ ಅವರು ಆಗಸ್ಟ್ 22 ರಿಂದ ಜಪಾನಿನ ಟೋಕಿಯೊ ದಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುತ್ತಿದ್ದು,ಇವರ ಪರವಾಗಿ ಅಶ್ವಿನಿ ಸಂಬಂಧಿಕರು ಚೆಕ್ ಸ್ವೀಕರಿಸಿದರು.