ರಾಜ್ಯ ಸರಕಾರದಿಂದ ಮಹಿಳಾ ಉದ್ಯೋಗಿಗಳಿಗೆ ಸಿಹಿ ಸುದ್ದಿ!

ಬೆಂಗಳೂರು : ಹಣಕಾಸು ಸಚಿವರು ಆಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 2021 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಕೊರೋನಾ ಸಂಕಷ್ಟದ ನಡುವೆ ರಾಜ್ಯ ಬಜೆಟ್  ನಲ್ಲಿ ಯಾವೆಲ್ಲ ಯೋಜನೆಗಳು ಘೋಷಣೆಯಾಗಲಿವೆ ಎಂಬ ಬಗ್ಗೆ ಜನರಿಗೆ ಸಾಕಷ್ಟು ಕೂತಹಲವಿದೆ.

ವಿಧಾನಸೌಧದಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10 ರಷ್ಟು ಮೀಸಲಾತಿ, ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ, ಮಹಿಳಾ ಉದ್ಯೋಗಿಗಳಿಗೆ 6 ತಿಂಗಳು ರಜೆ, ಪ್ಲ್ಯಾಟ್ ಗಳ ಮುದ್ರಾಂಕ ಶುಲ್ಕ ಇಳಿಕೆ, ಮೊದಲನೇ ನೋಂದಣಿ ಶೇ. 3 ರಷ್ಟು ಮಾತ್ರ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

error: Content is protected !!