ರಾಜ್ಯ ಸಭಾ ಚುನಾವಣೆಗಳಲ್ಲಿ ಜಯಭೇರಿ ಭಾರಿಸಲು ಬಿಜೆಪಿ ಸಿದ್ಧತೆ

ರಾಜ್ಯಸಭಾ ಚುನಾವಣಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಂತ್ರಗಾರಿಕೆ ನಡೆಸುವುದಕ್ಕಾಗಿ ಬುಧವಾರ (ಇಂದು) ಶಾಸಕಾಂಗ ಪಕ್ಷದ ಸಭೆ ನಡೆಸಲು ಬಿಜೆಪಿ ಮುಂದಾಗಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದು, ಎಲ್ಲ ಶಾಸಕರು ಖುದ್ದು ಉಪಸ್ಥಿತರಿರುವಂತೆ ಸೂಚನೆ ನೀಡಲಾಗಿದೆ.
ಬಿಜೆಪಿಯ ಎಲ್ಲಾ ಶಾಸಕರಿಗೂ ಕಡ್ಡಾಯವಾಗಿ ಹಾಜರಿರಲು ಸೂಚನೆ ನೀಡಲಾಗಿದೆ. ಇಂದು ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯಸಭಾ ಚುನಾವಣೆ ಗೆಲ್ಲಲು ರಣತಂತ್ರ ಹೆಣೆಯಲು ಕಮಲ ಪಡೆ ರಣತಂತ್ರ ಹೆಣೆಯುತ್ತಿದೆ.
ಇಂದೇ ಯಾವ ಶಾಸಕರು, ಯಾರಿಗೆ ಮತ ಹಾಕಬೇಕು ಅಂತ ನಿರ್ಧಾರವಾಗಲಿದೆ. ಶಾಸಕರಿಗೆ ಹೇಗೆ ಮತದಾನ ಮಾಡಬೇಕು ಅಂತ ಮುಖಂಡರು ತಿಳಿಸಲಿದ್ದಾರೆ. ಶಾಸಕರು ಹಾಕುವ ಮತ ಅಸಿಂಧು ಆಗದಂತೆ ಎಚ್ಚರ ವಹಿಸಲು ಟ್ರೈನಿಂಗ್ ನೀಡಲಿದ್ದಾರೆ.
ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಬಿಜೆಪಿ ವಿಪ್ ಕೂಡ ಜಾರಿ ಮಾಡಬಹುದಾಗಿದೆ.ಮೂರು ಅಭ್ಯರ್ಥಿಗಳನ್ನ ಗೆಲ್ಲಿಸಲು ಹೇಗೆಲ್ಲಾ ಪ್ಲಾನ್ ಮಾಡಬೇಕು ಅಂತ ಚರ್ಚೆ ನಡೆಯಲಿದೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಈ ಸಭೆ ನಡೆಯಲಿದೆ. ಹಲವು ತಿಂಗಳು ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುತ್ತಿದೆ.