ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸಿ

30 ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ದೆಗಳ ವಿವರ ಇಂತಿದೆ: ಹಗ್ಗ ಜಗ್ಗಾಟ ಪುರುಷರ ವಿಭಾಗ(9 ಜನರ ತಂಡ), ಹಗ್ಗ ಜಗ್ಗಾಟ ಮಹಿಳೆಯರ ಬಾಲಕರಿಗೆ(9 ಜನರ ತಂಡ), ಹಗ್ಗ ಜಗ್ಗಾಟ ಪ್ರೌಢಶಾಲಾ ಬಾಲಕರಿಗೆ(9 ಜನರ ತಂಡ), ಹಗ್ಗ ಜಗ್ಗಾಟ ಪ್ರೌಢಶಾಲಾ ಬಾಲಕಿಯರಿಗೆ(9 ಜನರ ತಂಡ). ಕಿರಿಯರ ಪ್ರಾಥಮಿಕ ಶಾಲಾ ಬಾಲಕರಿಗೆ 50 ಮೀ ಓಟ, ಕಿರಿಯರ ಪ್ರಾಥಮಿಕ ಶಾಲಾ ಬಾಲಕಿಯರಿಗೆ 50 ಮೀ ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕರಿಗೆ 100 ಮೀ ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕಿಯರಿಗೆ 100 ಮೀ ಓಟ, ಪ್ರೌಢಶಾಲಾ ಬಾಲಕರಿಗೆ 200 ಮೀ ಓಟ, ಪದವಿ ಪೂರ್ವ ಕಾಲೇಜು ಬಾಲಕರಿಗೆ 300 ಮೀ ಓಟ, ಪದವಿ ಪೂರ್ವ ಕಾಲೇಜು ಬಾಲಕಿಯರಿಗೆ 300 ಮೀ ಓಟ, 40ವರ್ಷ ಮೇಲ್ಟಟ್ಟವರಿಗೆ ಪುರುಷರಿಗೆ 300 ಮೀ ಓಟ, 40 ವರ್ಷ ಮೇಲ್ಟಟ್ಟವರಿಗೆ ಮಹಿಳೆಯರಿಗೆ 300 ಮೀ ಓಟ, ಸಾರ್ವಜನಿಕ ಪುರುಷರ ಮುಕ್ತ ಓಟ, ಸಾರ್ವಜನಿಕ ಮಹಿಳೆಯರ ಮುಕ್ತ ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ, ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
ಹಗ್ಗ-ಜಗ್ಗಾಟಕ್ಕೆ (ಪುರುಷರ ವಿಭಾಗಕ್ಕೆ ) ತಂಡಗಳಿಗೆ ಮೈದಾನ ಶುಲ್ಕ ರೂ :1000 ಆಗಿದೆ. ಮತ್ತು ಮಹಿಳೆಯರ ಹಗ್ಗ-ಜಗ್ಗಾಟ ತಂಡಗಳಿಗೆ ಮೈದಾನ ಶುಲ್ಕ 500 ಆಗಿದೆ. ಇದನ್ನು ಆಯಾ ತಂಡಗಳು ಆಗಸ್ಟ್ 12 ರ ಮಧ್ಯಾಹ್ನ 2 ಗಂಟೆ ಯೊಳಗೆ ಪಾವತಿಸಿ ತಂಡದ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು.
ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್, (ಮಡಿಕೇರಿ ಘಟಕ). ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಸಂಯಕ್ತಾಶ್ರಯದಲ್ಲಿ ಆಗಸ್ಟ್, 14 ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ತಾಲ್ಲೂಕ್ಕು ಕಗ್ಗೋಡ್ಲು ಗ್ರಾಮದ ದಿ.ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ 2021-22 ನೇ ಸಾಲಿನ ರಾಜ್ಯ ಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆ ನಡೆಯಲಿದೆ.
ಕ್ರೀಡಾ ತಂಡಗಳ ಪಂದ್ಯಗಳಿಗೆ ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಗುವುದು (ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ), ಪ್ರೌಢ ಶಾಲಾ ವಿಭಾಗದ ಹಗ್ಗ ಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ನಡೆಸಲಾಗುವುದು (ಮೈದಾನ ಶುಲ್ಕ ಇಲ್ಲ). ಓಟದ ಸ್ಪರ್ಧೆಗಳಿಗೆ ಪ್ರಥಮ, ದಿತೀಯ ಮತ್ತು ತೃತೀಯ ಪಾರಿತೋಷಕಗಳನ್ನು ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು.
ಕ್ರೀಡಾಕೂಟ ಮತ್ತು ಆಟೋಟ ಸ್ಪರ್ದೆ ಬೆಳಗ್ಗೆ 9 ಗಂಟೆಗೆ ಉದ್ಘಾಟನೆಯ ನಂತರ ಆರಂಭವಾಗಲಿದ್ದು, ಕ್ರೀಡಾಳುಗಳು, ಅಭಿಮಾನಿಗಳು ಶಿಸ್ತು ಬದ್ದ/ ಸ್ವಚ್ಚತೆ ವಾತಾವರಣವನ್ನು ಕಾಪಾಡುವಲ್ಲಿ ಸಹಕರಿಸಬೇಕು.
ತೀರ್ಪುಗಾರರ ತೀರ್ಮಾನವೇ ಆಂತಿಮ ತೀರ್ಮಾನ. ಈ ಬಾರಿಯ ಕ್ರೀಡಾಕೂಟವನ್ನು ಸರಳವಾಗಿ ಹಾಗೂ ಕೋವಿಡ್=19 ಸರ್ಕಾರದ ನಿಯಮದ ಅನುಸಾರ ನಡೆಸಲಾಗುವುದು. ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಹೆಚ್ಚಿನ ಮಾಹಿತಿಗೆ ನವೀನ್ ದೇರಳ, ಅಧ್ಯಕ್ಷರು, ತಾಲೂಕ್ಕು ಯುವ ಒಕ್ಕೂಟ ಮಡಿಕೇರಿ- 9740404520, ಬಾಲಾಡಿ ದಿಲೀಪ್ ಕುಮಾರ್, ಕಾರ್ಯದರ್ಶಿ, ತಾಲೂಕ್ಕು ಯುವ ಒಕ್ಕೂಟ ಮಡಿಕೇರಿ-9480674546, ಪಿ.ಪಿ.ಸುಕುಮಾರ್ ಅಧ್ಯಕ್ಷರು ಕೊಡಗು ಜಿಲ್ಲಾ ಯುವ ಒಕ್ಕೂಟ 9481213920. ಕೆ.ಕೆ.ಗಣೇಶ್, ಕಾರ್ಯದರ್ಶಿ, ಕೊಡಗು ಜಿಲ್ಲಾ ಯುವ ಒಕ್ಕೂಟ- 9449759029 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ತಿಳಿಸಿದ್ದಾರೆ.