ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ

ಒಕೇ ನವ ಡ್ರಾಗನ್ ಮಾರ್ಷಲ್ ಆರ್ಟ್ಸ್ ಇದರ ಸಂಸ್ಥಾಪಕರದ ಅಮೆ ಡಿಲಿತ್ ಉತ್ತಪ್ಪ ರವರ ತರಬೇತಿ ಯಲ್ಲಿ ಪಳಗಿದ ಅಟಲ್ ಬಿಹಾರಿ ವಾಜಪೇಯೀ ವಸತಿ ಶಾಲೆಭಾಗಮಂಡಲ ಕೊಡಗು ಜಿಲ್ಲೆಯ 41 ವಿದ್ಯಾರ್ಥಿಗಳು ಬೆಂಗಳೂರಿನ ರಾಜ್ ಕುಮಾರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವೈಟ್ ಬೆಲ್ಟ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿರುತ್ತಾರೆ.
ಸರಕಾರದ ಜೀವನ ಕೌಶಲ್ಯ ತರಬೇತಿ ಅಡಿಯಲ್ಲಿ ಕರಾಟೆ ತರಬೇತಿ ಪಡೆದ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲೆಂದು ಹಾರೈಕೆಯೊಂದಿಗೆ ಈ ಕ್ರೀಡಾ ಕೂಟದಲ್ಲಿ ಮಕ್ಕಳೊಂದಿಗೆ ಶಾಲಾ ಪ್ರಾಂಶುಪಾಲರಾದ ಕುಮಾರಸ್ವಾಮಿ ದೈಹಿಕ ಶಿಕ್ಷಕರಾದ ಪವನ್ ಸಾಗರ್, ಶಿಕ್ಷಕರಾದ ಗ್ರೀಷ್ಮ ಜಾರ್ಜ್, ಬಸವರಾಜ್ ಹಾಗೂ ಚೇತನ್ ಕೂಡಕಂಡಿ ಭಾಗವಹಿಸಿದ್ದರು.