ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್:ಪದಕಗಳ ಸುರಿಮಳೆ

28ನೇ ರಾಜ್ಯ ಮಟ್ಟದ ಕರಾಟೆ ಚಾಂಪಿನ್ ಶಿಪ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಕರಾಟೆ ಪಟುಗಳಿಗೆ 2 ಚಿನ್ನ ಪದಕ, 5 ಬೆಳ್ಳಿ ಮತ್ತು 24 ಕಂಚಿನ ಪದಕ ದೊರೆತಿದೆ.
ಫೆಬ್ರವರಿ 20 ರಂದು ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಅಸೋಸಿಯೇಷನ್, ಕರಾಟೆ ಇಂಡಿಯಾ ಒರ್ಗಾನಿಸಷನ್ ಮತ್ತು ವರ್ಲ್ಡ್ ಕರಾಟೆ ಫೆಡರೇಷನ್ ನಿಂದ ಗುರುತಿಸಲ್ಪಟ್ಟಿರುವ ಓಕಿನಾವಾ ಶೊರೀನ್ -ರ್ಯು ಕರಾಟೆ – ಡೂ ಆಫ್ ಇಂಡಿಯಾ ಮತ್ತು ಇಂಟರ್ನ್ಯಾಷನಲ್ ಮಬುನಿ- ಹಾ ಶೀಟೋ ರ್ಯು ಕರಾಟೆ (IMSKA)ಅಸೋಸಿಯೇಷನ್ ಅವರಿಂದ ಆಯೋಜಿಸಿದ್ದ 28ನೇ ರಾಜ್ಯ ಮಟ್ಟದ ಕರಾಟೆ ಚಾಂಪಿನ್ ಶಿಪ್ ಸ್ಪರ್ಧೆಯಲ್ಲಿ ನಾಪೋಕ್ಲು ಮತ್ತು ಕುಶಾಲನಗರದಿಂದ ಭಾಗವಹಿಸಿದ್ದ 21 ಕರಾಟೆ ಪಟುಗಳು ‘ಕುಮಟಿ ಮತ್ತು ಕಾಟ್ಟಾ” ಸ್ಪರ್ಧೆಯಲ್ಲಿ ವಿಜೇತರಾಗಿ ಒಟ್ಟು 2 ಚಿನ್ನದ ಪದಕ, 5 ಬೆಳ್ಳಿ ಮತ್ತು 24 ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಕುಶಾಲನಗರದ ಕುಂಫುಕಾನ್-ಶೀಟೋ-ರ್ಯು-ಕರಾಟೆ ಶಾಲೆಯ ರಂ ಶೀ ಮೊಹಮ್ಮದ್ ಇಕ್ಬಾಲ್ ಅವರ ನೇತೃತ್ವದಲ್ಲಿ ತರಬೇತಿ ಹೊಂದಿರುವ ನಾಪೋಕ್ಲಿನ ಅಂಕುರ್ ಪಬ್ಲಿಕ್ ಶಾಲೆ, ಕುಶಾಲನಗರದ ಫಾತಿಮಾ ಹೈಸ್ಕೂಲ್ ಮತ್ತು ಅನುಗ್ರಹ ಪಿಯು ಕಾಲೇಜಿನ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಶೀಹಾನ್ ಕೆ.ಪಿ.ಜೋಸ್, ಕ್ಯೋಶಿ. ಶಿವದಾಸ್ ಎನ್.ಜಿ., ಶಿಹಾನ್. ಸುರೇಶ್ ಕೆನಿಚಿರ, ಸೆನ್ಸಾಯ್ ಸೂರಜ್ ಹಾಗು ರಂಶೀ ಮೊಹಮ್ಮದ್ ಇಕ್ಬಾಲ್ ಅವರುಗಳು ಚಾಂಪಿನ್ ಶಿಪ್ ಸ್ಪರ್ಧೆಯ ರೆಫರಿಗಳಾಗಿದ್ದರು.

error: Content is protected !!