ರಾಜ್ಯ ಟೈಲರ್ ಎಸೋಸಿಯೇಷನ್ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷ ಹಾಗು ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಕ್ಷೇತ್ರ ಸಮಿತಿ ಮಡಿಕೇರಿ ಇದರ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಉಪಸ್ಥಿತಿಯಲ್ಲಿ ಇತ್ತೀಚೆಗೆ ಸಂಘದ ಕಛೇರಿಯಲ್ಲಿ ನಡೆಯಿತು.
ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾದ ಬಿ.ಎಸ್ ಆನಂದ, ಪ್ರದಾನ ಕಾರ್ಯದರ್ಶಿ ಕವಿತ, ಕೋಶಧಿಕಾರಿ ವಿಮಲಾ ಇವರುಗಳ ಸಮ್ಮುಖದಲ್ಲಿ ಸಭೆ ನಡೆಯಿತು.
ಸಂಘದ ನಿಯಮದ ಬಗ್ಗೆ ಪ್ರತಿಜ್ನಾವಿಧಿ ಮಾಡಲಾಯಿತು. ನಂತರ ಕಾರ್ಯಕಾರಿ ಸಮಿತಿ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಭೆಯ ನಿರ್ಣಯಗಳು:
1) ಪ್ರತಿ ತಿಂಗಳ ಸಭೆ,ತುರ್ತು ಸಭೆ ಇನ್ನಿತರ ಪ್ರಮುಖ ಸಭೆಯನ್ನು ಹೊರತುಪಡಿಸಿ 12 ಸಭೆ ನಡೆಸುವುದು.
ಪ್ರತಿ ತಿಂಗಳು 2ನೇ ಮಂಗಳವಾರ ಅಪರಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಗೆ ಸಭೆ ನಡೆಸಲು ತೀರ್ಮಾನಿಸಲಾಯಿತು.
2) 12 ಸಭೆಗಳಲ್ಲಿ 4 ಸಭೆಯನ್ನು ಉಪಾಧ್ಯಕ್ಷರು ಗಳು ಅಧ್ಯಕ್ಷರ ಸ್ಥಾನ ವಹಿಸಿಕೊಂಡು ಸಭೆ ನಡೆಸುವುದು.
3) ಪ್ರಸ್ತುತ 30 ಸದಸ್ಯರು ತಲಾ 100 ರಂತೆ ತಿಂಗಳಿಗೆ ಸಂಗ್ರಹಿಸುವುದು ಮಾಡುವುದು. ಹಾಗೂ ಹೆಚ್ಚಿನ ಸದಸ್ಯರನ್ನು ಮುಂದಿನ ಸಭೆಯಲ್ಲಿ ಸೇರಿಸಲು ತೀರ್ಮಾನಿಸಲಾಯಿತು.
4.ಬ್ಯಾಂಕ್‌ನ ವ್ಯವಹಾರಕ್ಕಾಗಿ ಈ ಹಿಂದೆ ಇದ್ದಂತಹ ಕರ್ನಾಟಕ ಬ್ಯಾಂಕ್ ಮಡಿಕೇರಿ ಶಾಖೆ ಇಲ್ಲಿ ಜಂಟಿ ಖಾತೆ 1 ಅಧ್ಯಕ್ಷರು,2 ಪ್ರ.ಕಾರ್ಯದರ್ಶಿ,3 ಕೋಶಾಧಿಕಾರಿ ಇವರುಗಳ ಪಧನಾಮದಲ್ಲಿ ಖಾತೆ ಮಾಡುವುದು. ವ್ಯವಹಾರ ನಡೆಸುವುದಕ್ಕೆ ಇಬ್ಬರು ಸಹಿ ಮಾಡುವುದು.ಅದ್ಯಕ್ಷರು/ ಕೋಶಾಧಿಕಾರಿ ಅಥವಾ ಪ್ರ. ಕಾರ್ಯದರ್ಶಿ/ಕೋಶಾಧಿಕಾರಿ ಎಂದು ಸರ್ವ ಸದಸ್ಯರ ಸಮ್ಮುಖದಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಕೊಡಗು ಜಿಲ್ಲಾ ಅಧ್ಯಕ್ಷರಾದ ನಂದೀಶ್ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರಫುಲ್ಲ,ಸ್ವಾಗತವನ್ನು ನವೀನ ಕುಮಾರಿ,ವಂದನಾರ್ಪಣೆಯನ್ನು ಪ್ರಫುಲ್ಲ ಗೋಪಾಲಕೃಷ್ಣ ಮಾಡಿದರು.