fbpx

ರಾಜ್ಯೋತ್ಸವದ ಆಚರಣೆ ಪ್ರಯುಕ್ತ ವಿದ್ಯುಕ್ತವಾಗಿ ನಡೆದ ‘ಸಮಷ್ಟಿ’ ಕಾರ್ಯಕ್ರಮ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಸಮಷ್ಟಿ” ಕನ್ನಡ ಕಲೆಗಳ ವೃಷ್ಟಿ ಕಾರ್ಯಕ್ರಮವು ದಿನಾಂಕ ಇಂದು ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಡಾ. ಮಾಧವ ಎಂ.ಕೆ, ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರು, ಡಾ. ನಂಜುಂಡೆಗೌಡ ಮುಖ್ಯ ಆಡಳಿತಾಧಿಕಾರಿಗಳು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ. ಡಾ. ಮಂಜುನಾಥ ಎಸ್, ವೈದ್ಯಕೀಯ ಅಧೀಕ್ಷಕರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಡಾ. ವಿಶಾಲ್ ಕುಮಾರ್, ಪ್ರಾಂಶುಪಾಲರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮಾಧವ ಎಂ.ಕೆ, ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರು, ಹಾಗೂ ಸಂಯೋಜಕರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ತುಳು ಸ್ನಾತ್ತಕೋತ್ತರ ಅಧ್ಯಯನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಬಾರಿಸು ಕನ್ನಡ ಡಿಂಡಿಮವ ಎಂಬ ಪಧ್ಯದ ಅರ್ಥವನ್ನು ಅರಿತುಕೊಂಡರೆ ಸಾಕು ನಾವು ಧನ್ಯರಾಗುತ್ತೇವೆ ನವಂಬರ್ ಕನ್ನಡಿಗರಾಗದೆ ಎಲ್ಲಾ ದಿನವು ನಮ್ಮ ಭಾಷೆಯ ಬಗ್ಗೆ ನಮ್ಮ ಜನರ ಹಾಗೂ ಸಂಸ್ಕೃತಿಯ ಬಗ್ಗೆ ಗರ್ವದಿಂದ ಇರಬೇಕು ದೃಷ್ಟಿ ಎಲ್ಲರದು ಒಂದೇ ಆದರೆ ಹಲವಾರು ಉತ್ತಮ ದೃಷ್ಟಿಕೋನವನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯ ಬೇರೆ ಭಾಷೆಯನ್ನು ವಿರೋಧಿಸುವುದಕ್ಕು ನಮ್ಮ ಭಾಷೆಯನ್ನು ಪ್ರೀತೀಸುವುದಕ್ಕೂ ಅಜಾಗಜಾಂತರ ಇದೆ ಅದನ್ನು ತಿಳಿದು ಬಾಳಬೇಕೆಂದು ಕಿವಿಮಾತನ್ನು ಹೇಳಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಜ್ರಂಭಣೆಯಿAದ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ. ನಂಜುಂಡೆಗೌಡ ರವರು ಮಾತನಾಡುತ್ತಾ ನಮ್ಮ ಭಾಷೆಯನ್ನು ಬೆಳೆಸಲು ಮೊದಲು ನಮ್ಮ ಕರ್ತವ್ಯವನ್ನು ಅರಿತರೆ ಅದುವೆ ರಾಜ್ಯೋತ್ಸವಕ್ಕೆ ಶೋಭೆ ಎಂದು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ಕನ್ನಡದ ಮೇಲಿನ ಪ್ರೀತಿಯನ್ನು ಪ್ರಶಂಶಿಸಿ ಹೀಗೆ ಕನ್ನಡದ ಸಂಸ್ಕೃತಿಯನ್ನು ಇನ್ನಷ್ಟು ಉಳಿಸಿ ಬೆಳಸಿ ಎಂದು ಪ್ರೋತ್ಸಾಹಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಮಂಜುನಾಥ ಎಸ್ ರವರು ಮಾತನಾಡಿ ಕನ್ನಡ ರಾಜ್ಯೋತ್ಸವು ನಮ್ಮ ನಾಡ ಹಬ್ಬವಾಗಿದ್ದು ಉತ್ಸವದಂತೆ ಎಲ್ಲಾರೂ ಸೇರಿ ಸಂತೋಷದಿಂದ ಆಚರಿಸೋಣ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಜಿಲ್ಲಾ ಶಸ್ತç ಚಿಕಿತ್ಸಕಾರದ ಡಾ. ವಿಶಾಲ್ ಕುಮಾರ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕನ್ನಡ ಪ್ರೇಮವನ್ನು ಪ್ರಶಂಶಿಸಿ ಯುವಕರಾದ ನಿಮ್ಮಂತವರು ಕನ್ನಡದ ಉಳಿವಿಗಾಗಿ ನಿಲ್ಲಬೇಕು ಆಶಿಸುತ್ತಾ ಕಾರ್ಯಕ್ರಮ್ಮಕ್ಕೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ “ಸಮಷ್ಟಿ” ಕನ್ನಡ ಕಲೆಗಳ ವೃಷ್ಟಿ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಚಟುವಟಿಕೆಯಲ್ಲಿ ವಿಜಯಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೇಯೆ ಮುಖ್ಯ ಅತಿಥಿಗಳಾದ ಡಾ. ಮಾಧವ ಎಂ ಕೆ ರವರಿಗೆ ಹಾಗೂ ಸಂಸ್ಥೆಯ ವಿದ್ಯಾರ್ಥಿಯಾದ ಡಾ. ದರ್ಶನ್ ಎಂವಿ ರವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸದರಿಯವರು ಬರೆದಿರುವ ಪುಸ್ತಕ ಪ್ರಕಟಣೆಗೊಂಡಿರುವುದಕ್ಕಾಗಿ ಕನ್ನಡ ಸಂಘದ ಪರವಾಗಿ ಅತಿಥಿಗಳಿಂದ ಸನ್ಮಾನಿಸಲಾಯಿತು.

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಪ್ರಯುಕ್ತ ಕಾಲೇಜಿನಲ್ಲಿ ಕವನ ಸ್ಪರ್ದೆ, ಲೇಖನ ಸ್ಪರ್ದೆ, ದೇಸಿಯ ಆಟಗಳಾದ ಬುಗುರಿ, ಗಿಲ್ಲಿದಾಂಡು, ಹಗ್ಗ ಜಗ್ಗಾಟ, ಚೌಕಬಾರ ಮುಂತಾದ ಆಟಗಳನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಆವರಣದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಾಮುಖ್ಯತೆ ಬಗ್ಗೆ ಬಿತ್ತಿಪತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ಎಂಬಿಬಿಎಸ್, ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗÀಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಎಂಬಿಬಿಎಸ್ ಎರಡನೇ ವರ್ಷದ ವಿದ್ಯಾರ್ಥಿಗಳಾದ ಕಿರ್ತನ ಮ್ತತು ಅಭಿಲಾಶ್ ನಡೆಸಿಕೊಟ್ಟರು ಮತ್ತು ಸ್ವಾಗತವನ್ನು ನಾಲ್ಕನೇ ವರ್ಷದ ವಿದ್ಯಾರ್ಥಿ ರಾಘವೇಂದ್ರ ನಡೆಸಿಕೊಟ್ಟರು ಹಾಗೂ ಮೂರನೇ ವರ್ಷದ ವಿದ್ಯಾರ್ಥಿಯಾದ ಸುಷ್ಮೀತ ರವರು ವಂದನಾರ್ಪಣೆಯನ್ನು ಮಾಡಿದರು.

error: Content is protected !!