ರಾಜ್ಯಪಾಲರಿಂದ ಭೂಸುಧಾರಣಾ ಕಾಯ್ದೆಗೆ ಅಂಕಿತ

ಬೆಂಗಳೂರು: ಭೂ ಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲಾಗಿದ್ದು. ಈ ನಡುವೆ ಈ ಕಾಯಿದೆಗೆ ಸಂಬಂಧಪಟ್ಟಂತೆ ಸೋಮವಾರ ರಾತ್ರಿ ರಾಜ್ಯಪಾಲ ವಜುಭಾಯ್ ವಾಲಾ ಅವರು ತಮ್ಮ ಅಂಕಿತ ಹಾಕಿದ್ದಾರೆ ಎನ್ನಲಾಗಿದೆ.ಉದ್ದೇಶಿತ ಕಾಯ್ದೆಯ ತಿದ್ದುಪಡಿಯಿಂದ ಕೃಷಿಯೇತರರು ಬೇಸಾಯ ಭೂಮಿ ಖರೀದಿಸಲು ಮತ್ತು ಆಹಾರ ಬೆಳೆಗಳನ್ನು ಬೆಳೆಯಲು ಅನುಮತಿ ನೀಡುತ್ತದೆ. ಆದರೆ, ಅವರು ಅದನ್ನು ಇತರ ಚಟುವಟಿಕೆಗಳಿಗೆ ಬಳಸುವ ಹಾಗಿಲ್ಲ.
ಸುಗ್ರೀವಾಜ್ಞೆಯು ಹೊಸ ವಿಭಾಗವನ್ನು (80 ಎ) ಸೇರ್ಪಡೆ ಮಾಡಲಾಗಿದೆ. ಇದು ಕರ್ನಾಟಕ ಎಸ್ಸಿ ಮತ್ತು ಎಸ್ಟಿ ಕಾಯ್ದೆ, 1978ರ ಅಡಿಯಲ್ಲಿ ರೈತರಿಗೆ ನೀಡಲಾದ ಜಮೀನಿಗೆ ಕಾಯ್ದೆಯಡಿ ವಿಶ್ರಾಂತಿ ಅನ್ವಯಿಸುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.