ರಾಜ್ಯಕ್ಕೆ ಆಗಮಿಸಿದ ಲಸಿಕೆ ಕೊವಿಶೀಲ್ಡ್

ಬೆಂಗಳೂರು: ಕೊರೋನಾ ಲಸಿಕೆಯಲ್ಲಿನ ಸರಬರಾಜಿನ ಕೋರತೆ ಹಿನ್ನಲೆಯಲ್ಲಿ,ರಾಜ್ಯ ಸರ್ಕಾರ ಕೈಗೊಂಡ ನೇರ ಖರೀದಿ ಪ್ರಕ್ರಿಯೆಯಲ್ಲಿ ಎರಡು ಲಕ್ಷದಷ್ಟು ಕೋವಿಶೀಲ್ಡ್ ಲಸಿಕೆ ಬೆಂಗಳೂರಿಗೆ ಆಗಮಿಸಿದೆ.ಎರಡನೇ ಹಂತದ ಲಸಿಕೆ ಕೊರತೆ ಉಂಟಾದ ಹಿನ್ನಲೆಯಲ್ಲಿ ನೇರವಾಗಿ ಖರೀದಿ ನಡೆದಿದ್ದು ,18 ವರ್ಷದಿಂದ 45 ವರ್ಷದವರೆಗಿನ ಲಸಿಕೆ ನೀಡುವುದು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.