ರಾಜಾರೋಷವಾಗಿ ಗೋಹತ್ಯೆ ಎಸಗುತ್ತಿರುವವರಿಗೆ ಕಡಿವಾಣ ಹಾಕಿ: ರಾಬಿನ್ ದೇವಯ್ಯ ಎಚ್ಚರಿಕೆ!

ಕೊಡಗು ಜಿಲ್ಲೆಯಲ್ಲಿ ಮತಾಂಧ ಶಕ್ತಿಗಳು ನಡೆಸುತ್ತಿರುವ ನಿರಂತರ ಗೋಹತ್ಯೆಗೆ ಜಿಲ್ಲಾಡಳಿತ ತಕ್ಷಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು ತಪ್ಪಿದಲ್ಲಿ ತಮ್ಮ ಗೋವುಗಳ ರಕ್ಷಣೆಗೆ ರೈತರೇ ಕಾನೂನನ್ನು ಕೈಗೆತ್ತಿಕೊಳ್ಳುವ ದಿನ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಗಮನಸೆಳೆದಿರುವ ಅವರು, ಇತ್ತೀಚಿನ ದಿನಗಳಲ್ಲಿ ಮತಾಂಧ ಶಕ್ತಿಗಳು ಜಿಲ್ಲಾ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ ಜಿಲ್ಲೆಯಲ್ಲಿ ರಾಜಾರೋಷವಾಗಿ ಗೋವುಗಳ ಹತ್ಯೆ ಮಾಡುತ್ತಿರುವುದು ಕಂಡುಬರುತ್ತಿದೆ.ಈ ಹಿಂದೆ ಜಿಲ್ಲೆಯಲ್ಲಿ ಗೌಪ್ಯವಾಗಿ ನಡೆಯುತ್ತಿದ್ದ ಗೋಹತ್ಯೆಯ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು.ಆದರೆ ಇದರ ವಿರುದ್ಧ ಧ್ವನಿ ಎತ್ತಿದವರಿಗೆ ‘ಕೋಮುವಾದಿ’ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ರಾಜಾರೋಷವಾಗಿ ಗೊಹತ್ಯೆ ನಡೆಯುತಿದ್ದು, ಸಮಾಜಕ್ಕೆ, ಪೊಲೀಸ್ ಇಲಾಖೆಗೆ, ಜಿಲ್ಲಾ ಆಡಳಿತಕ್ಕೆ ಗೊತ್ತಾಗಲಿ ಎಂಬಂತೆ ಗೋವುಗಳನ್ನು ಕದ್ದು ಸಾರ್ವಜನಿಕವಾಗಿ ಮಾಂಸ ಮಾಡಿ ಅದರ ತಲೆ, ಚರ್ಮ, ಕಾಲು ಕೈ, ಮತ್ತು ಬೇಡದ ವಸ್ತುಗಳನ್ನು ಅಲ್ಲಿಯೇ ಬಿಟ್ಟು, ‘ನಾವು ಗೊಹತ್ಯೆ ಮಾಡಿದ್ದೇವೆ ನೀವು ಏನು ಮಾಡುತ್ತೀರಿ’ ಎಂಬ ಹುಂಬತನವನ್ನು ಮತಾಂಧರು ಪ್ರದರ್ಶಿಸುತ್ತಿದ್ದಾರೆ. ಇದು ಪೊಲೀಸ್ ಇಲಾಖೆ, ಜಿಲ್ಲಾಡಳಿತಕ್ಕೆ ನೇರ ಸವಾಲು ಒಡ್ಡಿದಂತೆ ಹಾಗೂ ಹಿಂದೂ ಸಮಾಜಕ್ಕೆ ಸವಾಲು ಹಾಕುವ ರೀತಿ ಕಾಣುತ್ತಿದೆ. ಇದು ಒಂದು ಧರ್ಮದ ಭಾವನೆಗೆ ಘಾಸಿ ಉಂಟು ಮಾಡುವ ಪ್ರಯತ್ನವೂ ಆಗಿದೆ ಎಂದು ರಾಬಿನ್ ದೇವಯ್ಯ ತಿಳಿಸಿದ್ದಾರೆ.

ರೈತರ ಜಾನುವಾರುಗಳನ್ನು ಕದ್ದು ಮಾಂಸ ಮಾಡುತ್ತಿರುವುದು ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದ್ದು, ತಕ್ಷಣ ಜಿಲ್ಲಾಡಳಿತ ರೈತರ ಜಾನುವಾರುಗಳಿಗೆ ರಕ್ಷಣೆ ನೀಡಬೇಕು. ಅಲ್ಲದೆ ಗೋಹತ್ಯೆ ಮಾಡುವ ಕಟುಕರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದಲಿ ರೈತರೇ ಕಾನೂನನ್ನು ಕೈಗೆತ್ತಿಕೊಳ್ಳುವ ಸಮಯ ದೂರವಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

error: Content is protected !!