ರಸ್ತೆ ಸಂಚಾರ ನಿಷೇಧ!


ಕೊಡಗು:ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ಸಂಪಾಜೆ ನಡುವೆ ಜೋಡುಪಾಲ ಜಂಕ್ಷನ್ ಬಳಿಯ ಸರ್ವಿಸ್ ಸ್ಟೇಷನ್ ಎದುರು ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ರಸ್ತೆ ಕುಸಿತದ ಪರಿಣಾಮ ಮರಳು ಚೀಲ ಅಳವಡಿಸಿ ದುರಸ್ತಿ ಮಾಡಲಾಗಿತ್ತು.

ಇದೀಗ ಈ ಭಾರಿಯ ಮಳೆಗೆ ಚೀಲಗಳು ಜರಿದು ಹೋಗುತ್ತಿದ್ದು ರಸ್ತೆಯ ಅರ್ಧ ಭಾಗದಷ್ಟು ಕುಸಿಯುತ್ತಿರುವ ಹಿನ್ನಲೆಯಲ್ಲಿ ಪ್ರಯಾಣಿಕರ ವಾಹನ ಹೊರತುಪಡಿಸಿ ಸರಕು ಸಾಗಾಣಿಕೆಯ ಭಾರೀ ವಾಹನಗಳಾದ ಷಿಪ್ ಕಾರ್ಗೋ ಕಂಟೇನರ್ಸ್,ಮಲ್ಟಿ ಎಕ್ಸೆಲ್ ಟ್ರಕ್ಸ್ ನಂತಹ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.

error: Content is protected !!