fbpx

ರಸ್ತೆ ದುರಸ್ಥಿಗೆ ಆಗ್ರಹ

ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿರುವುದನ್ನು ಖಂಡಿಸಿ ಶಿವರಾಮೇ ಬಣದ ಕರವೇ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

ಕೊಡ್ಲಿಪೇಟೆಯಿಂದ ಮಾದಾಪುರದವರೆಗಿನ ರಸ್ತೆ ಮಡಿಕೇರಿ- ಹಾಸನ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ವಾಹನ ಸಂಚಾರ ಅಸಾಧ್ಯ ಎನ್ನುವಂತಿದೆ.

ಈಗಾಗಲೇ ರಸ್ತೆ ಅಭಿವೃದ್ಧಿಯ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆ ಯಾಗಿದ್ದು ಗುತ್ತಿಗೆದಾರರ ಮತ್ತು ಲೋಕೋಪಯೋಗಿ ಎಂಜಿನಿಯರ್ ಗಳ ಹೊಂದಾಣಿಕೆಯಿಂದ ನಕಲಿ ಬಿಲ್ ತಯಾರಿಸಿ, ಕಾಮಗಾರಿ ನಡೆದಿರುವುದಾಗಿ ವರದಿ ತಯಾರಿಸಿ ಹಣ ಲಪಟಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಯವರಿಗೂ ದೂರು ನೀಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

error: Content is protected !!