ರಸ್ತೆ ದುರಸ್ತಿಯಿಂದಾಗಿ ಬದಲಿ ರಸ್ತೆ

ಸೋಮವಾರಪೇಟೆ ತಾಲ್ಲೂಕಿನಿಂದ (ಬೆಂಗಳೂರು_ ಜಾಲೂರು) ಆಲೆಕಟ್ಟೆ ಬಳಿ ಮಳೆಯಿಂದ ರಸ್ತೆ ಹಾನಿಗೆ ಒಳಗಾಗಿರುವ ಹಿನ್ನಲೆಯಲ್ಲಿ ಏಪ್ರಿಲ್ 24 ರಿಂದ ಒಂದು ತಿಂಗಳ ಕಾಲ ದುರಸ್ತಿ ಕಾರ್ಯ ನಡೆಯುವ ಹಿನ್ನೆಲೆಯಿಂದ ವಾಹನ ಸಂಚಾರ ಸ್ಥಗಿತಗೊಳಿಸಿದ್ದು, ಚೌಡ್ಲು ಶಾಂತಳ್ಳಿ ಇಲ್ಲವೇ ಕಕ್ಕೆಹೂಳೆ-ಹಾನಗಲ್ಲು-ಕಲ್ಕಂದೂರು ಮಾರ್ಗ ಬಳಸುವಂತೆ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ತಿಳಿಸಿದ್ದಾರೆ.

ಈಗಾಗಲೇ ಸೂಚನೆ ಫಲಕ ಅಳವಡಿಸಿ ಸವಾರರಿಗೆ ಸಮಸ್ಯೆ ಆಗದಂತೆ ಸೂಚನೆ ನೀಡಲಾಗಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ 1973 ಸೆಕ್ಷನ್ 144 ಮತ್ತು ಮೋಟಾರು ವಾಹನ ಕಾಯ್ದೆಯ 1988ರ ಕಲಂ 115 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

error: Content is protected !!