fbpx

ರಸ್ತೆ ದುರಸ್ತಿಗೆ ಗ್ರಾಮಸ್ಥರ ಮನವಿ

ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಗೋಂದಿಬಸವನಳ್ಳಿಯ ರಸ್ತೆಗಳು ಅವ್ಯವಸ್ಥೆಯ ಗೂಡಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವು ಬಡಾವಾಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದ್ದು ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿದೆಯಲ್ಲದೆ, ದಿನನಿತ್ಯ ವಾಹನಗಳು ಸಿಲುಕಿಕೊಂಡು ಪರದಾಡುತ್ತಿವೆ. ಇದಕ್ಕೆ ಮುಖ್ಖ ಕಾರಣ ನೀರು ಹರಿಯಲು ಸಮರ್ಪಕವಾದ ಚರಂಡಿಗಳು ಸಹ ಇಲ್ಲದಿರುವುದು.

ಸುಮಾರು 30 ಕುಟುಂಬಗಳು ಇದೇ ರಸ್ತೆಯನ್ನು ಅವಲಂಭಿಸಿದ್ದು, ಮುಖ್ಯ ರಸ್ತೆಗೆ ಆಗಮಿಸಲು ಇದೊಂದೇ ಮಾರ್ಗವಾಗಿದೆ. ಮೇಲ್ಬಾಗದಲ್ಲಿನ ಗುಡ್ಡದಿಂದ ಹರಿದು ಬರುವ ನೀರು ಇಲ್ಲಿ ಶೇಖರವಾಗಿ ರಸ್ತೆ ಮೇಲೆ ಹರಿಯುತ್ತಿರುವುದನ್ನು ತಡಿಯುವಂತೆ ಬಡಾವಣೆ ನಿವಾಸಿಗಳು ಗ್ರಾಮ ಪಂಚಾಯಿತಿಯ ಮೊರೆ ಹೋಗಿದ್ದಾರೆ.

error: Content is protected !!