fbpx

ರಸ್ತೆ ಕುಸಿತಕ್ಕೆ ಗೇಬಿಯನ್ ತಡೆ ಗೋಡೆ ಬಳಕೆ

ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಸುರಿದ ಮಳೆಗೆ ಕುಸಿದ ರಸ್ತೆಗೆ ಗೇಬಿಯನ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ಇಲ್ಲಿನ ಅಬ್ಯಾಲದಲ್ಲಿ ಪ್ರತೀ ಭಾರಿ ಕುಸಿಯುವ ರಸ್ತೆಯಿಂದ ಮಡಿಕೇರಿಯಿಂದ ಸಿದ್ದಾಪುರ ನಡುವೆ ಸಂಪರ್ಕ ರಸ್ತೆ ಕುಸಿಯುತ್ತಾ ಬರುವ ಪರಿಣಾಮ ಗುಡ್ಡಗಾಡುವಿನಲ್ಲಿ ಈ ಪ್ರಯೋಗ ನಡೆಸಲಾಗುತ್ತಿದ್ದು, ಇದೀಗ ಚೆಟ್ಟಳ್ಳಿ ಯ ಅಭ್ಯಾಲ ರಸ್ತೆಯಲ್ಲೂ ಪ್ರಯೋಗ ಮಾಡಲಾಗಿದೆ.

ಗುಡ್ಡ ಅಥವಾ ರಸ್ತೆ ಕುಸಿಯುವ ಪ್ರದೇಶದಲ್ಲಿ ಕಬ್ಬಿಣದ ಬಲೆ ಮಾದರಿಯಲ್ಲಿ ಜೋಡಿಸಿ ಅದರೊಳಗೆ ಕಲ್ಲುಗಳನ್ನು ತುಂಬಿ ಮೆಟ್ಟಿಲಿನಾಕಾರದಲ್ಲಿ ಹಂತಹಂತವಾಗಿ ಏರಿಸಿ ಪರದೆಯನಿಟ್ಟು ಮಣ್ಣನ್ನು ತುಂಬಿ ಮಳೆನೀರು ಗೇಬಿಯನ್ ತಡೆಗೋಡೆ ಮೂಲಕ ಹರಿಯುವಂತೆ ಮಾಡುವುದು ಈ ಕಾಮಗಾರಿಯ ಮೂಲಕ ಬರೆಕುಸಿತ ತಡೆಯಲು ಸಾಧ್ಯವಾಗಲಿದೆ. ಈಗಾಗಲೇ ಇದೇ ಮಾದರಿಯಲ್ಲಿ ಕೇರಳ ಕೊಡಗು ಗಡಿ ಮಾಕುಟ್ಟದಲ್ಲಿ ಪ್ರಯೋಗ ಮಾಡಲಾಗಿದೆ.

error: Content is protected !!