ರಸ್ತೆ ಕಾಮಗಾರಿ ಗ್ರಾ.ಪಂ ಸದಸ್ಯರಿಂದ ವೀಕ್ಷಣೆ

ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಎರಡನೇ ವಾರ್ಡ್ ನ ವಿನಾಯಕ ಬಡಾವಣೆಯಲ್ಲಿ ಐದು ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಕಾಮಗಾರಿ ವೀಕ್ಷಣೆ ನಡೆಸಿದರು.

ಕೂಡುಮಂಗಳೂರು ಗ್ರಾ.ಪಂ ನ ಎರಡನೇ ನ ವಿನಾಯಕ ಬಡಾವಣೆಯಲ್ಲಿ ಶಾಸಕರ ನಿಧಿಯ ಐದು ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೀಕ್ಷಣೆ ನಡೆಸಿ ಪರಿಶೀಲನೆ ನಡೆಸಿದ ಅವರು, ಗುಣಮಟ್ಟವನ್ನು ಕಾಪಾಡುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸಿದರು. ಈ ಸಂದರ್ಭ ಎತ್ತರದ ಪ್ರದೇಶದಲ್ಲಿ ಕಲ್ಲನ್ನು ತೆರವುಗೊಳಿಸದೇ ಹಾಗೆಯೇ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೂಡಲೇ ಇದನ್ನು ಸಂಬಂಧಿಸಿದ ಅಭಿಯಂತರ ಗಮನಕ್ಕೆ ತಂದ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು, ಎತ್ತರದ ಭಾಗದಲ್ಲಿ ರಾಡ್ ಅಳವಡಿಸಿ ಕಾಮಗಾರಿಯ ನಡೆಸುವಂತೆ ತಿಳಿಸಿದರು.

ಈ ಸಂಧರ್ಭ ಮಾತನಾಡಿದ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ವಿನಾಯಕ ಬಡಾವಣೆಯಲ್ಲಿ ಐದು ಲಕ್ಷ ವೆಚ್ಚದಲ್ಲಿ ೮೫ ಮೀಟರ್ ಉದ್ಧದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದೆ. ವಾರ್ಡ್ ಮೂವರೂ ಸದಸ್ಯರು ಸೇರಿ, ಹದಿನೈದನೇ ಹಣಕಾಸು, ಪಂಚಾಯಿತಿ ನಿಧಿ, ನರೇಗಾ ಹಾಗೂ ಶಾಸಕರ ಅನುದಾನ ಸೇರಿ ೧೫ ಲಕ್ಷ ರೂ ಅನುದಾನವನ್ನು ಬಳಸಿ ವಿನಾಯಕ ಬಡಾವಣೆಯನ್ನು ಒಂದು ಹಂತದ ಮಟ್ಟಿಗೆ ಅಭಿವೃದ್ಧಿ ಪಡಿಸಲಾಗಿದೆ. ಇದೇ ರೀತಿ ವಾರ್ಡ್ ಬಸವೇಶ್ವರ ಬಡಾವಣೆ, ಸುಂದರನಗರ ಹಾಗೂ ನವಗ್ರಾಮವನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸುವತ್ತ ವಾರ್ಡ್ ನ ಮೂವರೂ ಸದಸ್ಯರು ಕಾರ್ಯೋನ್ಮುಖರಾಗುತ್ತೇವೆ ಎಂದರು.

error: Content is protected !!