ರಸ್ತೆ ಕಾಮಗಾರಿ ಅಂತ್ಯ: ಸವಾಲಿನ ರಸ್ತೆ ಸದ್ಯದಲ್ಲೇ ಸಂಚಾರಕ್ಕೆ ಸಿದ್ಧ

ಕೊಡಗು: ರಸ್ತೆ ಕುಸಿತದಿಂದ ಪ್ರಪಾತಕ್ಕೆ ಬೀಳಲಿದ್ದ ಕತ್ತಲೆಕಾಡು, ಚೆಟ್ಟಳಿ ನಡುವಿನ ರಸ್ತೆಗೆ ಮರುಜೀವ ಸಿಕ್ಕಿದು ಮಡಿಕೇರಿ ಸಿದ್ದಾಪುರ ಮಾರ್ಗದ ಕಾಮಗಾರಿ ಯಶಸ್ವಿಯಾಗಿದೆ.ಕಳೆದ ಮಳೆಗಾಲದ ಸಂದರ್ಭ ಉಂಟಾದ ಬೆಟ್ಟಕುಸಿತದ ವೇಳೆ 500 ಮೀಟರ್ ರಸ್ತೆ ಕುಸಿತ ಉಂಟಾಗಿದ್ದ ಕಾರಣ ಸಂಪರ್ಕವೇ ಕಡಿತಗೊಂಡಿತ್ತು. ಇದೀಗ ಕಾರ್ಮಿಕರು ಮತ್ತು ಲೋಕೋಪಯೋಗಿ ಇಲಾಖೆಯ ಅವಿರತ ಪ್ರಯತ್ನದ ಫಲವಾಗಿ ಬಸ್ ಗಳ ಓಡಾಟಕ್ಕೆ ಅನುಕೂಲವಾಗಿದೆ.

error: Content is protected !!