fbpx

ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗಿರುವ ರಸ್ತೆ ಸರಿಪಡಿಸುವಂತೆ ಮನವಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಗೌಡಳ್ಳಿ ಗ್ರಾಮ ಪಂಚಾಯಿತಿ ಸೇರಿದ ಹೆಗ್ಗಳ ಮತ್ತು ಮಲ್ಲೇಶ್ವರ ಹೋಗುವ ರಾಜ್ಯ ಹೆದ್ದಾರಿ ಯ ಮಧ್ಯದಲ್ಲಿ ಖಾಸಗಿ ಅವರ ತೋಟದಿಂದ ಸಿಲ್ವರ್ ಮರಗಳು ಕಡಿದು ಮರಗಳನ್ನು ಎಳೆಯುವ ಸಂದರ್ಭದಲ್ಲಿ ರಸ್ತೆಗೆ ಮಣ್ಣುಗಳ ಬಂದು ತುಂಬಾ ತೊಂದರೆ ಆಗುತ್ತಿದೆ ಸಾರ್ವಜನಿಕರಿಗೆ ಮತ್ತು ಈ ಮರಗಳನ್ನು ಸಾಗಿಸುವ ಸಂದರ್ಭ ರಸ್ತೆಗೆ ಗಾಡಿಗಳನ್ನು ನಿಲ್ಲಿಸಿ, ದೊಡ್ಡ ಯಂತ್ರಗಳನ್ನು ಬಳಸಿ ದೊಡ್ಡ ಲಾರಿಗಳು ಮರಗಳನ್ನು ಸಾಗಿಸುತ್ತಿದ್ದವು. ಇದರಿಂದ ವಾಹನ ಚಾಲಕರಿಗೆ ಮತ್ತು ಸವಾರರಿಗೆ, ನಡೆದುಕೊಂಡು ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಬೇಗನೆ ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಬಾರಿ ಗಾತ್ರದ ಲಾರಿಗಳಲ್ಲಿ ಯಾವುದೇ ಮರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶ ಇದ್ದರು ಇದನ್ನು ಗಾಳಿಗೆ ತೂರಿ ಇಲ್ಲಿ ಸಂಚರಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿ ಕ್ರಮ ಕೈಗೊಳ್ಳುವುದಕ್ಕೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜರವರು ಮತ್ತು ಹೋಬಳಿ ಅಧ್ಯಕ್ಷ ಆನಂದ್ ಮತ್ತು ನಂದಿಗುಂದ ಗ್ರಾಮಸ್ಥರಾದ ಮಹೇಶ್ ಇದ್ದರು.

ಈ ಸಂದರ್ಭದಲ್ಲಿ ಕರವೇ ಹೋಬಳಿ ಅಧ್ಯಕ್ಷರಾದ ಆನಂದ ರವರು ಮಾತನಾಡಿ ಈ ಜಾಗದಲ್ಲಿ 4ಬೈಕ್ ಗಳು ಬಿದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಈ ರಸ್ತೆಯಲ್ಲಿ ತಿರುವು ಇದ್ದು, ಇಲ್ಲೇ ಮರಗಳನ್ನು ತುಂಬಿಸುತ್ತಿದ್ದಾರೆ ಮತ್ತು ಈ ಮಣ್ಣು ರಸ್ತೆಗೆ ಬರುತ್ತಿದ್ದು, ಎಲ್ಲರಿಗೂ ತೊಂದರೆ ಉಂಟಾಗಿದೆ. ಇದನ್ನು ಬೇಗನೆ ನಿಲ್ಲಿಸಬೇಕೆಂದು ಅಧಿಕಾರಿಗಳಗೆ ಕೋರಿದ್ದಾರೆ.

error: Content is protected !!