ರಕ್ತದಾನ ಶಿಬಿರ

ಗೋಣಿಕೊಪ್ಪಲು ಸೆ 8. ರಕ್ತದಾನ ಎಂದೆಂದಿಗೂ ಶ್ರೇಷ್ಠ ದಾನವೇ ಆದರೂ ಕೊರೋನಾದ ಈ ಸಂಕಷ್ಟದ ಕಾಲದಲ್ಲಿ ರಕ್ತದ ಅವಶ್ಯಕತೆ ಅತೀ ಹೆಚ್ಚು ಇರುವಾಗ ರಕ್ತದಾನ ಅತ್ಯಂತ ಶ್ರೇಷ್ಠ ದಾನ ಎಂದು ಕುಟ್ಟ ವೃತ್ತದ ಇನ್ಸಪೆಕ್ಟರ್ ಸಿ.ಎ ಮಂಜಪ್ಪ ನುಡಿದರು.

ಜೆ.ಸಿ.ಐ ಗೋಲ್ಡನ್ ಪೊನ್ನಂಪೇಟೆ ಮತ್ತು ಕುಟ್ಟಾದ ಅನುಗ್ರಹ ಎಚ್ ಪಿ.ಪೆಟ್ರೋಲಿಯಂ ಸಹಭಾಗಿತ್ವದಲ್ಲಿ ಕುಟ್ಟ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು. ಮುಂದುವರೆದ ಅವರು ಆರೋಗ್ಯವಂತರಿಗೆ ಮಾತ್ರ ರಕ್ತದಾನ ಮಾಡಲು ಅವಕಾಶವಿರುತ್ತದೆ. ಆದುದರಿಂದ ಮೊದಲು ತಾವು ಆರೋಗ್ಯವಂತರಾಗಿದ್ದರೆ ತಮ್ಮ ರಕ್ತ ನೀಡುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಲು ಸಾಧ್ಯ ಎಂದರು.

ಕೊಡಗು ಜಿಲ್ಲಾ ಬ್ಲಡ್ ಬ್ಯಾಂಕ್ ನ ಡಾ ಕರುಂಬಯ್ಯ ಮಾತನಾಡುತ್ತಾ ರಕ್ತಕ್ಕೆ ಪರ್ಯಾಯ ಇಲ್ಲ. ಯಾವುದೇ ಔಷಧಿಯಿಂದ ರಕ್ತ ತಯಾರಿಸಲು ಸಾಧ್ಯವಿಲ್ಲ. ಅಲ್ಲದೆ ಅದನ್ನು ಹೆಚ್ಚು ದಿನ ಇಟ್ಟು ಕೊಳ್ಳಲು ಸಾಧ್ಯವಿಲ್ಲ.ಮಾನವನ ದೇಹದಿಂದ ರಕ್ತ ತೆಗೆದ ನಂತರ ನಿಗದಿತ ಅವಧಿಯ ಒಳಗೆ ಅದನ್ನು ವಿವಿಧ ಅಂಶಗಳಾಗಿ ಬೇರ್ಪಡಿಸಿ ಶೇಖರಿಸಿಡ ಬೇಕಾಗುತದೆ. ಅದಕ್ಕೂ ಜೀವಿತ ಕಾಲಾವಧಿ ಇರುತ್ತದೆ. ಈಗಿನ ಕೊರೋನಾ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇದ್ದು ಸ್ವಯಂಪ್ರೇರಿತ ದಾನಿಗಳು ಮುಂದೆ ಬರಬೇಕಿದೆ. ರಕ್ತದಾನದ ಮುಖಾಂತರ ಆರೋಗ್ಯವೃದ್ದಿ ಕೂಡ ಆಗುತ್ತದೆ ಪ್ರತೀ ಮೂರು ತಿಂಗಳಿಗೊಮ್ಮೆ ಗಂಡಸರು ಮತ್ತು ಪ್ರತೀ ನಾಲ್ಕು ತಿಂಗಳಿಗೊಮ್ಮೆ ಹೆಂಗಸರು ರಕ್ತದಾನ ಮಾಡಬಹುದು. ಆಗ ಹೊಸ ರಕ್ತ ಉತ್ಪಾದನೆ ಆಗುತದೆ ಎಂದು ಮಾಹಿತಿ ನೀಡಿದರು.
ಕುಟ್ಟಾ ಅನುಗ್ರಹ ಹೆಚ್ ಪಿ ಪೆಟ್ರೋಲಿಯಂ ಮಾಲಿಕ ಚಂದನ್ ಕಾಮತ್ ಮಾತನಾಡಿ ತಾನು ಈ ವರ್ಷದಲ್ಲಿ ಆಯೋಜಿಸುತ್ತಿರುವ ಮೂರನೇ ರಕ್ತದಾನ ಶಿಬಿರ. ಕೊರೋನಾ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇದೆ ಎನ್ನುವುದನ್ನು ಮನಗಂಡು ಇಲ್ಲಿ ಈ ಶಿಬಿರವನ್ನು ನಡೆಸುವ ಬಗ್ಗೆ ಪೊನ್ನಂಪೇಟೆ ಗೋಲ್ಡನ್ ಜೆಸಿಐ ಅಧ್ಯಕ್ಷ ದಿಲನ್ ಚಂಗಪ್ಪ ರವರೊಂದಿಗೆ ಚರ್ಚಿಸಿ ಆಯೋಜಿಸಿದಾಗ ಕುಟ್ಟ ಗ್ರಾಮದ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಅವರಿಗೆ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಗೋಲ್ಡನ್ ಪೊನ್ನಂಪೇಟೆಯ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ವಹಿಸಿದರು. ವೇದಿಕೆಯಲ್ಲಿ ಕಾಮತ್ ಗ್ರೂಪ್ ನ ಎಂ.ಪಿ.ಕೇಶವ ಕಾಮತ್,
ಜೆ.ಸಿ.ಐನ ನಿಕಟಪೂರ್ವ ಅಧ್ಯಕ್ಷರಾದ‌ ಗಯಾ ಜೋಯಪ್ಪ, ಕಾರ್ಯಕ್ರಮ ಸಂಯೋಜಕ ಜೆ.ಸಿ.ಅಜಯ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಬ್ ಇನ್ಸಪೆಕ್ಟರ್ ಚಂದ್ರಪ್ಪ, ಪೋಲೀಸ್ ಸಿಬ್ಬಂದಿಗಳು, ಕಾಫಿ ಬೆಳಗಾರರಾದ ನೆಲ್ಲಿರ ನಟೇಶ್, ಚಕ್ಕೇರ ಗಣಪತಿ, ಎಸ್ ಎನ್ ಡಿ ಪಿ ಅಧ್ಯಕ್ಷರಾದ ಅರುಣ್ ಕಂದಪ್ಪ, ಚೌಕಿರ ಮೋಹನ್, ವಿನು, ಜೆ.ಸಿ.ಐನ ಮಾಜಿ ಅಧ್ಯಕ್ಷರುಗಳಾದ ಜೆ.ಸಿ.ಪವನ್, ಪುಳಂಗಡ ನಟೇಶ್, ಜೆಸಿರೆಟ್ ಅಧ್ಯಕ್ಷೆ ರಿಸ್ತಾ ಚಂಗಪ್ಪ, ಮಾಜಿ ಅಧ್ಯಕ್ಷೆ ಲೇಖಾ ನಟೇಶ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಟ್ಟ ವೃತ್ತ ನಿರೀಕ್ಷಕ ಸಿ.ಎ ಮಂಜಪ್ಪ ನುಡಿದಂತೆ ನಡೆದರು ತಾವೇ ಮೊದಲಿಗೆ ರಕ್ತದಾನ ಮಾಡಿದ್ದಲ್ಲದೆ ಹತ್ತಕ್ಜೂ ಹೆಚ್ಚು ಸಿಬ್ಬಂದಿಗಳಿಂದ ರಕ್ತದಾನ ಮಾಡಿಸಿದರು. ಒಟ್ಟಾಗಿ 35 ಮಂದಿ ರಕ್ತದಾನ ಮಾಡಿದರು.
ಚಂದನ್ ಕಾಮತ್ ಸ್ವಾಗತಿಸಿದರು, ಕಾರ್ಯಕ್ರಮ ಸಂಯೋಜಕ ಜೆ.ಸಿ ಅಜಯ್‌ ವಂದಿಸಿದರು.

error: Content is protected !!