ಯೋಧ ಮತ್ತು ಕುಟುಂಬದ ಮೇಲೆ ಹಲ್ಲೆ ಪ್ರಕರಣ ; ಆರೋಪಿಗಳು ಅಂದರ್!

ಕೊಡಗು: ಯೋಧ ಅಶೋಕ್ ಸೇರಿದಂತೆ ಅವನ ಕುಟುಂಬದ ಮೇಲೆ ಅಪಘಾತಕ್ಕೆ ಕಾರಣವಾಗಿ ಹಲ್ಲೆ ಮಾಡಿದ ಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ರಫೀಖ್ ಖಾನ್,ಇಸಾಕ್ ಖಾನ್, ನಾಸೀರ್ ಬಂಧಿತರು ಎಂದು ತಿಳಿದು ಬಂದಿದೆ.
ಇಸಾಕ್ ಕೊಡಗು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿದ್ದು, ಬಂಧಿತರು ಎಲ್ಲರೂ ಮೂಲತಃ ಸುಂಠಿಕೊಪ್ಪದ ನಿವಾಸಿಗಳು ಎಂಬ ಮಾಹಿತಿ ತಿಳಿದು ಬಂದಿದೆ. ಅಪಘಾತ ಸಂಭವಿಸಿದ ಮೇಲೆ ಜಗಳಕ್ಕಿಳಿದ ಇಸಾಕ್ ತನ್ನ ಗುಂಪೊಂದನ್ನು ಕರೆಸಿ, ಯೋಧ ಅಶೋಕ್ ಹಾಗು ಅವರ ಕುಟುಂಬ ಸದಸ್ಯರ ಮೇಲೆ ತೀವ್ರ ಹಲ್ಲೆ ನಡೆಸಿದ್ದ!