ಯೋಧನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮತ್ತೆ ಮೂವರ ಬಂಧನ

ಮಡಿಕೇರಿ: ಸುಂಟಿಕೊಪ್ಪ ಬಳಿ ಬೋಯಿಕೇರಿಯಲ್ಲಿ ಯೋಧನ ಹಾಗು ಅವನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದುಶ್ಕರ್ಮಿಗಳ ಪೈಕಿ ಮತ್ತೂ ಮೂರು ಆರೋಪಿಗಳನ್ನು ಬಂಧಿಸಲಾಗಿದೆ.

ಸುಂಟಿಕೊಪ್ಪದ ಅಪ್ಪಾರಂಡ ಬಡಾವಣೆಯ ಹಚ್.ಯು ಆಶಿಕ್ ಖಾನ್(38), ತೌಫಿಕ್ ಖಾನ್ (36), ಹಾಗು ಕೆ.ಇ.ಬಿ ಬಳಿಯ 2ನೇ ಬ್ಲಾಕ್ ನಿವಾಸಿ ಅಂಜಾದ್ ಖಾನ್ (32) ಎಂಬ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಮಂದಿಯನ್ನು ಬಂಧಿಸಲಾಗಿದೆ.

error: Content is protected !!