ಯೋಧನ ಮನೆಗೆ ಭೇಟಿ ನೀಡಲಿರುವ ಸಂಸದ ಪ್ರತಾಪ್ ಸಿಂಹ

ಕೊಡಗು: ಯೋಧ ಅಶೋಕ್ ಕುಮಾರ್ ಹಾಗು ಅವನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಚಿನ್ನಾಭರಣಗಳನ್ನು ಕಳುವು ಮಾಡಿದ ಜೆಡಿಎಸ್ ಪಕ್ಷದ ಸದಸ್ಯ ಹಾಗು ಅವನ ಜಿಹಾದಿ ಬಳಗವನ್ನು ಬಂಧಿಸುವಂತೆ ನಿನ್ನೆ ತಿಮ್ಮಯ್ಯ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಇಂದು ಯೋಧನ ಮನೆಗೆ ಕೊಡಗು-ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಅವರು ಭೇಟಿ ನೀಡಲಿದ್ದಾರೆ.

ಇನ್ನೇನು ಕೆಲವೇ ಗಂಟೆಗಳಲ್ಲಿ ಅವರ ಮನೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಜಿಹಾದಿ ದುಶ್ಕರ್ಮಿಗಳನ್ನು ಬಂಧಿಸುವಂತೆ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಡಳಿತಕ್ಕೆ ವಿಶ್ವ ಹಿಂದೂ ಪರಿಷದ್ ಹಾಗು ಸಂಘ ಪರಿವಾರ ಗಡುವು ನೀಡಿದೆ. ಈ ಹಿನ್ನಲೆಯಲ್ಲಿ ಯೋಧನ ಮನೆಗೆ ಸಂಸದರ ಭೇಟಿ ಮಹತ್ವ ಪಡೆದುಕೊಂಡಿದೆ.

error: Content is protected !!