ಯುವ ಸಾಧಕನಿಗೆ ಪ್ರಶಸ್ತಿ ಪ್ರಧಾನ

ಶ್ರೀ ಒಕ್ಕಲಿಗರ ಮರಿಯಪ್ಪ ನಿವೃತ್ತರಾದ ಪೊಲೀಸ್ ಇನ್ಸ್ ಪೆಕ್ಟರ್ ಬಲ್ಯಮುಂಡೂರು ಗ್ರಾಮ ಹಾಗೂ ಕೈಕೇರಿ ಗ್ರಾಮದ ವಿ.ಈ ರಾಜುರವರ ಮೊಮ್ಮಗನಾದ ವಿ.ಕೆ ವಿಶಾಲ್ ಗೌಡ ಅವರಿಗೆ ಎನ್.ಸಿ.ಸಿ ಕಡೆಯಿಂದ ದಿನಾಂಕ ಇತ್ತೀಚೆಗೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಡೆಪ್ಯುಟಿ ಜನರಲ್ ಡೈರೆಕ್ಟರ್ ಎನ್.ಸಿ.ಸಿ ಅವರಿಂದ ಚೀಫ್ ಮಿನಿಸ್ಟರ್ ಕಮೆಂಡೇಶನ್ ಎಂಬ ಪ್ರಶಸ್ತಿ ದೊರೆಯಿತು.

ಇವರ ಸೇವೆಯಲ್ಲಿನ ಶಿಸ್ತು ಹಾಗೂ ಬದ್ಧತೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದೆ. ಇವರು ಬೆಂಗಳೂರಿನ ಸಂತ ಜೋಸಫರ ಅಟಾನಮಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದು ಅಲ್ಲಿ 1 KAR ARMD SQN TP-3 ಎನ್ ಸಿಸಿ ಕೆಡೆಟ್ ಆಗಿದ್ದರು.

error: Content is protected !!