ಯುವ ವಾಗ್ಮಿಗಳ ಬಳಗದಿಂದ ರಾಜ್ಯ ಮಟ್ಟದ ಆನ್ ಲೈನ್ ಚರ್ಚಾ ಸ್ಪರ್ಧೆ

ಯುವ ವಾಗ್ಮಿಗಳ ಬಳಗ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ, ಕಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಿದ್ದು ಇದೀಗ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

ಸರ್ಕಾರವು ಪಿ.ಯು.ಸಿ ಪರೀಕ್ಷೆ ರದ್ದು ಪಡಿಸಿರುವ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ವಿದ್ಯಾರ್ಥಿಗಳ ಭವಿಷ್ಯದ ಅಧಃಪತನಕ್ಕೆ ಆಹ್ವಾನವೇ? ವಿಷಯದ ಕುರಿತು ರಾಜ್ಯಮಟ್ಟದ ಚರ್ಚಾಸ್ಪರ್ಧೆಯನ್ನು ಏರ್ಪಡಿಸಿದ್ದು ಸ್ಪರ್ಧೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಳ್ಳಲು ಜೂನ್ 18 ಕಡೆ ದಿನಾಂಕವಾಗಿದ್ದು ಸ್ಪರ್ಧೆಯು ಎರಡು ಸುತ್ತು ನಡೆಯುತ್ತದೆ. ವಿಜೇತರಾದ ಐದು ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಅಭಿನಂದನಪತ್ರವಿರುತ್ತದೆ. ಮಾಹಿತಿಗಾಗಿ 74068 54007 ಸಂಪರ್ಕಿಸಬಹುದು ಎಂದು ಆಯೋಜಕ ದೀಕ್ಷಿತ್ ನಾಯರ್ ತಿಳಿಸಿದರು.