ಯುವ ನಟಿ ಆತ್ಮ ಹತ್ಯೆ

ಕುಶಾಲನಗರದ ಬೈಚನಹಳ್ಳಿಯ ಯುವ ನಟಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರಿನ ಕೆಂಗೇರಿ ಬಳಿಯ ಕುಂಬಳಗೋಡುವಿನಲ್ಲಿ ನಡೆದ ಘಟನೆ ಇದಾಗಿದ್ದು, ಬೆಂಗಳೂರಿನ ದೊಡ್ಡ ಬೆಲೆಯಿರುವ ಅಪಾರ್ಟ್ ಮೆಂಟ್ ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದ ಸೌಜನ್ಯ ಸತ್ತ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಕನ್ನಡದ ಚೌಕಟ್ಟು ಮತ್ತು ಫಮ್ ಹೆಸರಿನ ಎರಡು ಸಿನಿಮಾದಲ್ಲಿ ಅಭಿನಯಿಸಿದ್ದ ಯುವ ಕಲಾವಿದೆ ಇವರಾಗಿದ್ದರು.