ಯುವ ಕಾರ್ಮಿಕ ಆತ್ಮಹತ್ಯೆ

Crime
ಕೊಡಗು(ಸೋಮವಾರಪೇಟೆ): ಬಜೆಗುಂಡಿಯಲ್ಲಿ ಯುವಕ ಕಾರ್ಮಿಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಕೇರಳದಲ್ಲಿ ಕೆಲಸ ಮಾಡಿಕೊಂಡಿದ್ದ ರದೀಶ್ (20) ಬಜೆಗುಂಡಿಯ ಮನೆಗೆ ಬಂದಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದ ,ಕೆಲಸಕ್ಕೆ ಮನೆಗೆ ಬಾರದಿದ್ದರಿಂದ ಗಾಬರಿಗೊಂಡು ಹುಡುಕಾಟ ನಡೆಸಿದ ಸಂದರ್ಭ ಕಾಫಿ ತೋಟದಲ್ಲಿ ನೇಣಿಗೆ ಕೊರಳೊಡ್ಡಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಸೋಮವಾರಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.