fbpx

ಯುವ ಉತ್ಸಾಹಿ ಜನ ಸೇವಕ: ಪೊಕ್ಕಳಿಚಂಡ ಕುಲ್ದೀಪ್ ಪೂಣಚ್ಚ..

ಪೊಕ್ಕಳಿಚಂಡ ಕುಲ್ದೀಪ್ ಪೂಣಚ್ಚ ಅವರು ತಮ್ಮ ಅಜ್ಜಿ ಪಾರ್ವತಮ್ಮ ವಿ.ವಿ ಅವರು ಜನರಿಗೆ‌ ಮಾಡುತ್ತಿದ್ದ ಸಹಾಯ, ಕಷ್ಟ ಎಂದು ಬಂದವರಿಗೆ ನೆರವಾಗುತ್ತಿದ್ದ ರೀತಿ ಎಲ್ಲವೂ ನೋಡಿ, ಅವರಿಂದ ಪ್ರೇರೇಪಿತರಾಗಿದ್ದರು. ಬಡವರ, ಅಸಹಾಯಕರಿಗೆ ಸಹಾಯ ಹಸ್ತ ಚಾಚುವ ಗುಣ ತನ್ನ ಅಜ್ಜಿಯಿಂದ ಅಳವಡಿಸಿಕೊಂಡು ಜನಪರ ಕಾರ್ಯಗಳಿಗೆ ಆಸಕ್ತಿ ವಹಿಸಲು ಮುಂದಾದರು.


2000ದ ಇಸವಿಯಲ್ಲಿ ಸ್ವಸ್ಥಿಕ್ ಯುವ ವೇದಿಕೆ ಎಂಬ ಗಣಪತಿ ಸಮಿತಿ ರಚಿಸಲಾಯಿತು. 19 ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿದ್ದು, ಪ್ರತಿ ವರ್ಷವೂ ಆಚರಿಸಲು ತಗುಲುವ ವೆಚ್ಚ ಬಿಟ್ಟು, ಉಳಿದ ಮಿಕ್ಕ ಹಣವನ್ನು ಬಡವರಿಗೆ, ಅನಾಥಾಶ್ರಮಗಳಿಗೆ ಹಾಗು ವೃದ್ಧಾಶ್ರಮಗಳಿಗೆ ನೀಡಿಲಾಗುತ್ತಿತ್ತು. ಕುಲ್ದೀಪ್ ಅವರು ಸ್ವಸ್ಥಿಕ್ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ ಮಾಡುತ್ತಿದ್ದ ಜನಪರ ಕಾರ್ಯಗಳನ್ನು ಗುರುತಿಸಿ, ಬಿಜೆಪಿ ಪಕ್ಷವು ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷರ ಸ್ಥಾನವನ್ನು ನೀಡಿತು. ಅಲ್ಲಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಜನಾನುರಾಗಿ ಕೆಲಸಗಳಿಗೆ ಹೆಜ್ಜೆ ಮುಂದಿಟ್ಟರು.


ನಂತರ ನಮೋ ಗ್ರೂಪ್ ಫೌಂಡೇಶನ್ ಮೂಲಕ ಬಿಜೆಪಿ ಪಕ್ಷವು ಗುಜರಾತಿನ ಅಹಮದಾಬಾದಿಗೆ 2014 ಬರುವಂತೆ ಬುಲಾವ್ ಬಂತು. ಅಲ್ಲಿ ಕೊಡಗು-ಕೇರಳದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಲಾಯಿತು. ಅಲ್ಲಿ ಆ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸುತ್ತಾ ಬಂದರು. ರಾಜ್ಯೋತ್ಸವ, ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಇತ್ಯಾದಿ ವಿಶೇಷ ದಿನಗಳನ್ನು ಅರ್ಥಪೂರ್ಣವಾಗಿ ನಮೋ ಗ್ರೂಪ್ ಫೌಂಡೇಶನ್ ಇಂದ ಆಚರಿಸಿಕೊಂಡು ಬರಲಾಯಿತು.


ಮತ್ತಷ್ಟು ಉತ್ಸಾಹದಿಂದ ಕೊಡಗಿನಲ್ಲಿ ಜಲಪ್ರಳಯ ಆಗಿದ್ದ ಸಂದರ್ಭ, ಬೆಂಗಳೂರಿನ ಮೋದಿ ಬ್ರಿಗೇಡ್ ಜೊತೆ ಸೇರಿ ನಮೋ ಗ್ರೂಪ್ ಫೌಂಡೇಶನ್ ಫುಡ್ ಕಿಟ್ ಗಳನ್ನು ವಿತರಣೆಯನ್ನು ತಾಳತ್ ಮನೆ, ಹಾಕತ್ತೂರು, ಇನ್ನೂ ಹಲವಾರು ಹಳ್ಳಿಯ ಜನಕ್ಕೆ ವಿತರಣೆ ಮಾಡಿ, ಸಾಂತ್ವಾನ ಹೇಳಲಾಯಿತು. ಇದರಲ್ಲೂ ಕುಲ್ದೀಪ್ ಹಾಗು ಅವರ ಸ್ವಸ್ಥಿಕ್ ಯುವ ವೇದಿಕೆ ಕೂಡ ಪ್ರಮುಖ ಪಾತ್ರ ವಹಿಸಿದರು.


ಇತ್ತೀಚೆಗೆ ಲೋಕಸಭಾ ಚುನಾವಣೆ ನಡೆದಾಗ ಟೀಂ ಮೋದಿ ಎಂಬ ತಂಡದ ರಚನೆಯಾಯಿತು. ಆಗ ಪೊನ್ನಂಪೇಟೆಯಿಂದ ಗೋಣಿಕೊಪ್ಪವರೆಗೆ ಬೈಕ್ ರಾಲಿ ಹಮ್ಮಿಕೊಳ್ಳಲಾಯಿತು. ಗೋಣಿಕೊಪ್ಪದಲ್ಲಿ ಬಹಿರಂಗ ಸಭೆಯನ್ನು ಕೂಡ ಏರ್ಪಡಿಸಲಾಯಿತು. ಅದರ ಸುವ್ಯವಸ್ಥಿತ ನಡೆಯುವಿಕೆಗೆ ಕುಲ್ದೀಪ್ ಅವರೂ ಪ್ರಮುಖ ಕಾರಣರಾದರು. ಟೀಂ ಮೋದಿ ತಂಡದ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ರಾಷ್ಟ್ರೀಯ ಯುವ ದಿನಾಚರಣೆಗೆ ಗೋಣಿಕೊಪ್ಪದ ಸಮುದಾಯ ಭವನದ ಆವರಷದಲ್ಲಿ ನಡೆಸಲಾಯಿತು. ಬಾಳುಗೋಡು ಗ್ರಾಮದಲ್ಲಿ ಈಶ್ವರ ದೇವಸ್ಥಾನವೊಂದನ್ನು ನಿರ್ಲಕ್ಷ್ಯಕ್ಕೆ ತುತ್ತಾಗಿ, ಪಾಳು ಬಿದ್ದಿತು. ಅಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ, ಅದರ ಪುನಶ್ಚೇತನಕ್ಕೆ ಪ್ರಯತ್ನಿಸಲಾಯಿತು.


ಆಮೇಲೆ ವಾಟ್ಸ್ ಅಪ್ ಗ್ರೂಪ್ ಆಗಿದ್ದ ‘ಕೊಡಗು ಯುವ ಸೇನೆ’ ಮೂಲಕ ಮಡಿಕೇರಿ, ವಿರಾಜಪಾಟೆ, ಸೋಮವಾರಪೇಟೆ, ಗೋಣಿಕೊಪ್ಪ, ಬಾಳುಗೋಡು, ಬಿಟ್ಟಂಗಾಲ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕೊರೋನಾ ಸೊಂಕಿನಿಂದಾಗಿ ಜನ ಆರ್ಥಿಕವಾಗಿ ಸೊರಗುತ್ತಿರುವಾಗ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಆ ಸಂದರ್ಭದಲ್ಲಿ ‘ಮಾಧ್ಯಮ ಸ್ಪಂದನಾ’ ಎಂಬ ಪತ್ರಕರ್ತರ ಸಂಘಟನೆ ಜೊತೆ ಸೇರಿ ಮರಗೋಡು ಗ್ರಾಮದಲ್ಲಿ ಕಿಟ್ ವಿತರಣೆ ಮಾಡಲಾಯಿತು.ಚೆನ್ನಗೊಲ್ಲಿ ಎಂಬ ಗ್ರಾಮದಲ್ಲಿ ಸರಿ ಸುಮಾರು 500 ಕುಟುಂಬಗಳಿಗೆ ಸರಿಯಾದ ಆಹಾರ ಇರಲಿಲ್ಲ. ಅವರಿಗೂ ಆಹಾರದ ಕಿಟ್ಟನ್ನು ಕೊಡಗು ಯುವ ಸೇನೆ ವಿತರಿಸಲಾಯಿತು. ಇದಕ್ಕೆ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯರಾದ ಎಚ್.ಎಂ ಮುರುಳಿಧರ್ ಅವರು ತುಂಬಾ ಬೆಂಬಲ ಕೊಟ್ಟರು. ಮತ್ತು ಮಾಚ್ಚೆಟ್ಟೀರ ಸಚಿನ್ ಮಂದಣ್ಣ ಅವರು ಸೇರಿದಂತೆ ಹಲವು ದಾನಿಗಳು ಕೊಡು ಕೈಯಲ್ಲಿ ದಾನ ಮಾಡಿದ್ದರು ಎಂದರು. ಕೇವಲ 260 ಸದಸ್ಯರಿರುವ ಒಂದು ವಾಟ್ಸ್ ಅಪ್ ಗ್ರೂಪ್ ಆದ ‘ಕೊಡಗು ಯುವ ಸೇನೆ’ ಇಷ್ಟಲ್ಲಾ ಜನ ಸೇವೆ ಮಾಡಿ, ಜಿಲ್ಲೆಯ ಜನರ ಮನವನ್ನು ಗೆದ್ದಿತು.


ಮುಂದೆ ರಾಜಕಾರಣದಲ್ಲಿ ಕೆಲಸ ಮಾಡುವುದಕ್ಕಿಂತ ಸಂಘಟನೆಗಳಲ್ಲಿ ಉತ್ತಮ ಜನ ಸೇವೆ ಮಾಡುವ ಇರಾದೆ ಕುಲ್ದೀಪ್ ಹೊಂದಿದ್ದಾರೆ‌. ‘ಪಕ್ಷಕ್ಕಿಂತ ಹೆಚ್ಚು ಸಂಘಟನೆಗಳ ಮೂಲಕ ಮತ್ತಷ್ಟು ಕೆಲಸ ಮಾಡಬೇಕು. ಸಂಘಟನೆಗಳ ಮೂಲಕ ಸೀಮಿತ ವ್ಯಾಪ್ತಿ ಇಲ್ಲದೆ ಎಲ್ಲಾ ಜನ ಸಾಮಾನ್ಯರಿಗೂ ಸಹಾಯವಾಗಬೇಕು ಎಂದು ಹೇಳುತ್ತಾರೆ. ಬಿಜೆಪಿ ಪಕ್ಷದಲ್ಲಿ ಈಗಲೂ ಕಾರ್ಯೋನ್ಮುಕವಾಗಿದ್ದು, ನರೇಂದ್ರ ಮೋದಿ ಅವರ ಉತ್ತಮ ಕೆಲಸಗಳೇ ನಮಗೆ ಸ್ಪೂರ್ತಿಯಾಗಿದೆ. ಅವರನ್ನೇ ಆದರ್ಶವಾಗಿ ಇಟ್ಟುಕೊಂಡು ಸಮಾಜ ಸೇವೆಯ ಹಾದಿಯಲ್ಲಿ ಹೋಗುತ್ತಿದ್ದೇವೆ ಎಂದರು.


‘ಸ್ವಸ್ಥಿಕ್ ಯುವ ವೇದಿಕೆಯಿಂದ ಬೆಳೆದ ನಾನು ಹಾಗು ಸಹಚರರು ನನ್ನೊಂದಿಗೆ ಸದಾ ಜೊತೆಗಿದ್ದಾರೆ. ಪ್ರಮುಖರಾದ ಮಾಚೆಟ್ಟೀರ ಸಚಿನ್ ಮಂದಣ್ಣ, ಮುರಗೇಶ್ ಅಯ್ಯಪ್ಪ, ಸತೀಶ್, ಅಶ್ವತ್ಥ್, ಭರತ್, ಪುಷ್ಟರಾಜ್, ಓಮೇಶ್ ಮಾನಗಲ್ಲಿ, ಸೋನಲ್ ಪೂಜಾರಿ, ಜಯಣ್ಣ ಅವರೆಲ್ಲರ ಸ್ನೇಹ ಸಂಬಂಧದಲ್ಲಿ ಸ್ವಸ್ಥಿಕ್ ಯುವ ವೇದಿಕೆ ಕಟ್ಟಲಾಯಿತು ಎಂದು ಎಲ್ಲರನ್ನು ನೆನಪಿಸಿಕೊಂಡರು.


“An opportunity to work is good luck for me, I put my soul into it. Each opportunity opens the gates for the next one.”

-Narendra Modi
Honourable prime minister of India


ಅಂತೆಯೇ ಪ್ರತಿ ಸಣ್ಣ ಅವಕಾಶಗಳನ್ನು ಬಳಸಿಕೊಂಡು ಅಂದುಕೊಂಡ ಹಾಗೆ ಜನ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಾ ಬೆಳೆಯುತ್ತಿರುವ ಜನ ನಾಯಕ ಯುವ ಸಂಘಟಕ ಪೊಕ್ಕಳಿಚಂಡ ಕುಲ್ದೀಪ್ ಪೂಣಚ್ಚ ಅವರಿಗೇ ಎಲ್ಲಾ ಶುಭವಾಗಲಿ ಮತ್ತಷ್ಟು ದೊಡ್ಡ ಮಟ್ಟಕ್ಕೆ ಏರುವಂತಾಗಲಿ ಎಂದು ಅವರಿಗೆ ನಮ್ಮ ಸುದ್ದಿ ಸಂತೆ ಬಳಗ ಹಾರೈಸುತ್ತದೆ.

error: Content is protected !!