ಯುವಕ ಆತ್ಮಹತ್ಯೆ

ಕೊಡಗು(ಹಟ್ಟಿಹೊಳೆ):ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಹಟ್ಟಹೊಳೆಯಲ್ಲಿ ನಡೆದಿದೆ. ಇಲ್ಲಿನ ಹಾಡಗೇರಿ ಪೈಸರಿ ನಿವಾಸಿ ಭಾಸ್ಕರ್ ಎಂಬುವವರ ಪುತ್ರ ಮಂಜು 29 ಮೃತ ವ್ಯಕ್ತಿಯಾಗಿದ್ದು,ಮೃತ ಮಾದಾಪುರದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.ಸೋಮವಾರಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.