ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ರಿಂದ ಅಂಕಿತಾ ಸುರೇಶ್ ಗೆ ಗೌರವ, 10 ಲಕ್ಷ ರು. ಪುರಸ್ಕಾರ ನೀಡಿಕೆ

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ತಂಡದ ಅಪ್ರತಿಮ ಸಾಧನೆಗೆ ಕಾರಣಕತ೯ರಾದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸನ್ಮಾನಿಸಿ ಗೌರವಿಸಿದರು. ಅಂಕಿತಾ ಅವರಿಗೆ 10 ಲಕ್ಷ ರು. ಗಳ ಕೊಡುಗೆಯನ್ನು ಯೋಗಿ ಆದಿಥ್ಯನಾಥ್ ನೀಡಿ ಪುರಸ್ಕರಿಸಿದರು. ಅಂತೆಯೇ ಒಡಿಸ್ಸಾ ಮುಖ್ಯಮಂತ್ರಿ ಬಿಜು ಪಾಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾತಿ೯ಯರನ್ನು ಒಡಿಸ್ಸಾ ರಾಜ್ಯದ ಪರವಾಗಿ ಸನ್ಮಾನಿಸಿ ಗೌರವಿಸಿದ್ದು ಗಮನಾಹ೯.

error: Content is protected !!