fbpx

ಯಾರಿಗ್ಹೇಳಣಾ ನಮ್ಮ ಪ್ರಾಬ್ಲಂ?: ಬಾಣಾವರ ಹಾಡಿ  ವಾಸಿಗಳ ಮುಗಿಯದ ಅಳಲು

ವರದಿ:ಗಿರಿಧರ್ ಕೊಂಪುಳಿರ

ದಟ್ಟ ಅರಣ್ಯ ಪ್ರದೇಶ,ಅವುಗಳ ನಡುವೆ ಕಾಡಾನೆಗಳ ಓಡಾಟ,ದಿನನಿತ್ಯ ಜೀವ ಕೈಯಲ್ಲಿಡಿದುಕೊಂಡು ಹಾಡಿವಾಸಿಗಳ ಪರದಾಟ.ಹೌದು ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಬಾಣಾವರ ಚೆಕ್ ಪೋಸ್ಟ್ ಬಳಿರುವ ಹಾಡಿ ವಾಸಿಗಳ ಎರಡು ದಶಕ್ಕಕ್ಕೂ ಅಧಿಕ ವರ್ಷಗಳ ಗೋಳು.
ಸುಮಾರು ಎಂಟು ಕುಟುಂಬಗಳು ಸಧ್ಯಕ್ಕೆ ಇಲ್ಲಿವಾಸವಿದ್ದು,ಕೂಲಿನಾಲಿ ಮಾಡುತ್ತ ಬದಕು ಕಟ್ಟಿಕೊಂಡಿದ್ದಾರೆ,ಈ ಹಿಂದೆ ಕಾಡಾನೆಗಳಿಗೆ ಹೆದರಿ ಮರದ ಮೇಲೆ ಅಟ್ಟಣಿಗೆ ಮಾಡಿಕೊಂಡಿದ್ದ ವಾಸಿಗಳು ಕ್ರಮೇಣ ತಮ್ಮ ಸ್ವಂತ ಖರ್ಚಿನಲ್ಲಿ,ಶೀಟು,ಟಾರ್ಪಲ್ ತಂದು ಸಣ್ಣದೊಂದು ಜೋಪುಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಕೂಲಿ ಜೊತೆಗೆ ಒಂದಷ್ಟು ಹಸುಗಳನ್ನು ಸಾಕಿಕೊಂಡಿದ್ದಾರೆ,ಕೃಷಿ ಮಾಡುವುದಕ್ಕಾಗಲಿ ಇಲ್ಲಾ ಪುನರ್ವಸತಿ ಮನೆಯಾಗಲಿ ಇಲ್ಲಿವರೆಗೆ ಇವರಿಗೆ ಲಭಿಸಿಲ್ಲ.

ಲಸಿಕೆ ಬೇಡವೆಂದವರಿವರು: ಇಲ್ಲಿನವರ ಮೌಢ್ಯವೋ ಏನು ಕೆಲವೊಂದಷ್ಟು ಮಂದಿ ಪದವಿ ಶಿಕ್ಷಣ ಮುಗಿಸಿ ಕೂಲಿ ಕೆಲಸ ಮಾಡಿಕೊಂಡಿರುವ ಯುವಕರು ಕೋವಿಡ್ ಲಸಿಕೆ ಪಡೆದು,ತಮ್ಮ ಕುಟುಂಬದವರಿಗೂ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಆದರೆ ಹಿರಿಯ ನಾಗರೀಕರು, “ಇಷ್ಟು ವರ್ಷ ಬದುಕಿದ್ದೇವೆ ನಮಗೆ ಯಾವ ಕಾಯಿಲೆ ಬರೋಕಿಲ್ಲ” ಎಂದು ಖಡಕ್ ಉತ್ತರ ನೀಡುತ್ತಾರೆ,ಇಲ್ಲಿಗೆ ಪಕ್ಕದ ಎರಡು ಕಿಲೋಮೀಟರ್ ದೂರದಲ್ಲಿ ಲಸಿಕೆ ಕೇಂದ್ರ ಇದ್ದರೂ ಹೋಗದೆ ಹಿಂದೇಟು ಹಾಕಿದ್ದು ಉಂಟು.

ಒಟ್ಟಾರೆ ತಮಗೊಂದು ಶಾಶ್ವತ ಪರಿಹಾರ ಒದಗಿಸಿಕೊಡಿ,ಎಂದು ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕೇಳಿಕೊಳ್ಳಲಾಯಿತು ಆದರೆ ಪ್ರಯೋಜನ ಮಾತ್ರ ಕಂಡಿಲ್ಲ.

error: Content is protected !!