ಯಶಸ್ವಿಯಾಗಿ ನಡೆಯಲಿದೆ ಜನಜಾಗೃತಿ ಸಮಾವೇಶ: ಶಾಸಕ ಕೆ.ಜಿ ಬೋಪಯ್ಯ

ಕಾಂಗ್ರಸ್ ವತಿಯಿಂದ ಮಾಜಿ ಸಿ ಎಂ ಹಾಗು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಆಗಸ್ಟ್ 26 ರಂದು ಕರೆ ನೀಡಿರುವ ಎಸ್ಪಿ ಕಚೇರಿಯ ಮುತ್ತಿಗೆ ದಿನವೇ ಬಿಜೆಪಿ ಜನಜಾಗೃತಿ ಕಾರ್ಯಕ್ರಮ ನಡೆಸಲು ಪಕ್ಷ ನಿರ್ಧರಿಸಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಜಿಲ್ಲೆಯ ಎಲ್ಲಾ ಕಡೆಯಿಂದ ಆಗಮಿಸಲಿದ್ದಾರೆ ಎಂದರು. ಹಾಗಾಗಿ ಜನಜಾಗೃತಿ ಸಮಾವೇಶ ಯಶಸ್ವಿಯಾಗಿ ನಡೆಯಲಿದೆ ಎಂದರು.