ಯಶಸ್ವಿಯಾಗಿ ನಡೆದ ಪ್ರಕೃತಿ ಶಿಬಿರ

ನಾಗರಹೊಳೆ ಅಭಯಾರಣ್ಯ ಅಂಚಿನಲ್ಲಿರುವ ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿ ಗ್ರಾಮದ ವಿವಿಧ ಸುದ್ದಿ ಸಂಸ್ಥೆಯ ಸಹಯೋಗದ ವತಿಯಿಂದ ಪ್ರಕೃತಿ ಶಿಬಿರವನ್ನು ಆಯೋಜಿಸಲಾಗಿತ್ತು.

ಪ್ರಕೃತಿ ಬಗ್ಗೆ ಆಗುಹೋಗುಗಳು,ಸಮತೋಲನ,ವನ್ಯಜೀವಿ ಸಂರಕ್ಷಣೆ,ಬುಡಕಟ್ಟಿನ ಜೀವನ ಹೀಗೆ ಹತ್ತು ಹಲವು ವಿಚಾರಗಳನ್ನು ವಿದ್ಯಾರ್ಥಿಗಳು ಮತ್ತು ಪರಿಸರ ಆರಾಧಕರಿಗೆ ಅರಿವು ಮೂಡಿಸುವ ಕಾರ್ಯ ನಡಸಲಾಯಿತು.
ಸುಮಾರು 50 ಮಂದಿ ಪೂನ್ನಂಪೇಟೆ ಅರಣ್ಯ ಮಹಾವಿದ್ಯಾಯಲದ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಕೊಡಗಿನ ಹೆಸರಾಂತ ಚಿತ್ರಕಲಾ ದಿ ಸತೀಶ್ ಕುಂಚದಿಂದ ಅರಳಿದ ಬಹುವರ್ಣ ಚಿತ್ರವನ್ನು ವನ್ಯ ಪ್ರೇಮಿ ಕೆ.ಎಂ.ಚಿಣ್ಣಪ್ಪರಿಗೆ ಅರ್ಪಿಸಲಾಯಿತು.
ಶಿಬಿರದಲ್ಲಿ ಡಿಸಿಎಫ್ ಎ.ಟಿ.ಪೂವಯ್ಯ,ಧಿಲ್ಲನ್ ಚಂಗಪ್ಪ, ಕಾವ್ಯಾ ಸಂಜು, ಬೆಂಗಳೂರು ಶಿವಕುಮಾರ್,ಜೀಜೇಶ್ ಕ್ರಷ್ಣ ,ಪ್ರೀತಮ್,ಕ್ರಷ್ಣ ಚೈತನ್ಯ,ಪುಷ್ಪ, ರಿಸ್ತಾ ಚಂಗಪ್ಪ,ಡಯನಾ ಪೂವಯ್ಯ,ಗೀತಾ ನಾಯ್ಡು,ಗಾನಶ್ರೀ..ಜೆ.ಸೋಮಣ್ಣ ಭಾಗಿಯಾಗಿದ್ದರು.