ಯಶಸ್ವಿಯಾಗಿ ನಡೆದ ಪಂಜಿನ ಮೆರವಣಿಗೆ

ನೆನ್ನೆಯ ದಿನ ಮಾರ್ಚ್ 23, ಸ್ವಾತಂತ್ರ ಸಂಗ್ರಾಮದಲ್ಲಿ ವೀರ ಮರಣವನ್ನು ಹೊಂದಿದ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜ್ ಗುರು ಅವರ ಬಲಿದಾನ ದಿವಸವನ್ನು ಶಹೀದ್ ದಿವಸವನ್ನಾಗಿ ಮಂಡಲ ಯುವಮೋರ್ಚಾ ವತಿಯಿಂದ 250ಕ್ಕೂ ಹೆಚ್ಚು ಜನರನ್ನೊಳಗೊಡಂತೆ ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೇರೂರು ಅವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆಯನ್ನು ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷರು ದರ್ಶನ್ ಜೋಯಪ್ಪ, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹಿತ್ ತಿಮ್ಮಯ್ಯ ಹಾಗೂ ಪದ್ಮನಾಬ್ ನೆಲ್ಲಿಹುದಿಕೇರಿ, ಮಂಡಲ ಅಧ್ಯಕ್ಷರು ಮನುಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು HK. ಮಾದಪ್ಪ, ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರು ಮಹೇಶ್ ತಿಮ್ಮಯ್ಯ, ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿಗಳು ಜೈ ಶಂಕರ್, ದಕ್ಷಿಣಕನ್ನಡ ಪ್ರಭಾರಿ ಭಾರತೀಶ್, ಜಿಲ್ಲಾ ಉಪಾಧ್ಯಕ್ಷರು ಹಾಗೂ ಯುವಮೋರ್ಚಾ ಜಿಲ್ಲಾ ಪ್ರಭಾರಿ ರೂಪ ಸತೀಶ್, ಮಾಜಿ MLC ಆದಂತಹ S.G.ಮೇದಪ್ಪ ನವರು, ಬಾಜಪಾ ಮುಖಂಡರು, ಯುವಮೋರ್ಚಾ ಪದಾಧಿಕಾರಿಗಳು, ಸಮಿತಿ ಸದಸ್ಯರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!