ಯಶಸ್ವಿಯಾಗಿ ನಡೆದ ‘ಕೊಡವ ರೈಡಸ್೯ ಕ್ಲಬ್’ ಸಮಿತಿ ಚುನಾವಣೆ!
ಕೊಡವ ರೈಡರ್ಸ್ ಕ್ಲಬ್ 2019ರ ಜೂನ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕೊಡಗಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದು, ಕ್ಲಬ್ನಲ್ಲಿ ಸುಮಾರು 150ಕ್ಕು ಹೆಚ್ಚು ಸದಸ್ಯರಿದ್ದು ಇದೇ ಮೊದಲ ಬಾರಿಗೆ ಕೊಡವ ರೈಡರ್ಸ್ ಕ್ಲಬ್ ಸಂಘಟನೆಯಲ್ಲಿ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ಮತ್ತು ಸಣ್ಣುವಂಡ ದರ್ಶನ್ ಕಾವೇರಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಕ್ಯಾಪ್ಟನ್ ಆಗಿ ಅಪ್ಪಂಡೆರಂಡ ದೇವಯ್ಯ, ವೈಸ್ ಕ್ಯಾಪ್ಟನ್ ಆಗಿ ಮುರುವಂಡ ಸುಮ ಕುಟ್ಟಪ್ಪ, ಕೊ-ಆರ್ಡಿನೇಟರ್ ಗಳಾಗಿ ಬೊಮ್ಮಂಡ ರೋಶನ್, ವೈಸ್ ಕೊ-ಆರ್ಡಿನೇಟರ್ ಆಗಿ ಅಜ್ಜಿಕುಟ್ಟಿರ ಮಂಜು, ಸದಸ್ಯರುಗಳಾಗಿ ಪೊನ್ನಚಂಡ ಅನೀಶ್ ಕಾರ್ಯಪ್ಪ, ಮೊಣ್ಣಂಡ ಗಗನ್, ಗುಡಿಯಂಗಡ ಲಿಕಿನ್, ಮುಕ್ಕಾಟೀರ ಬೋಪಣ್ಣ ಆಯ್ಕೆ ಆಗಿದ್ದಾರೆ ಎಂದು ಕೊಡವ ರೈಡರ್ಸ್ ಕ್ಲಬ್ನ ಸಂಸ್ಥಾಪಕರುಗಳಾದ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ಮತ್ತು ಸಣ್ಣುವಂಡ ದರ್ಶನ್ ಕಾವೇರಪ್ಪ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು.