fbpx

ಯಶಸ್ವಿಯಾಗಿ ನಡೆದ ಕೊಡಗು ಜಿಲ್ಲಾ ವೃತ್ತಿ ಪ್ರಕೋಷ್ಠದ ಸಭೆ


ಕೊಡಗು ಜಿಲ್ಲಾ ವೃತ್ತಿಪರ ಪ್ರಕೋಷ್ಠದ ಪೂರ್ವ ಕಾರ್ಯಕಾರಣಿ ಸಭೆಯು ಇಂದು ಮಡಿಕೇರಿ ನಗರದ ಬಿಜೆಪಿ ಕಚೇರಿಯಲ್ಲಿ ಜರುಗಿತು. ಇಂದು ಸಭೆಯಲ್ಲಿ ಪ್ರಕೋಷ್ಠದ ಸದಸ್ಯರ ಪರಿಚಯ ಮತ್ತು ವೃತ್ತಿಪರ ಪ್ರಕೋಷ್ಠದ ಉದ್ದೇಶಗಳ ಬಗೆಗೆ ಜಿಲ್ಲಾ ಸಂಚಾಲಕರಾದ ಡಾ||ಮೋಹನ್ ಅಪ್ಪಾಜಿಯವರು ವಿವರಿಸಿದರು.

ಮುಂದುವರೆಯುತ್ತಾ ಮಡಿಕೇರಿ ಕೊಡವ ಸಮಾಜದಲ್ಲಿ ಯಶಸ್ವಿಯಾಗಿ ನಡೆದ ಲಸಿಕೆ ಅಭಿಯಾನದ ಬಗೆಗೆ ಹೇಳಿದರು, ಈವರೆಗೆ ಸುಮಾರು 4000ದಷ್ಟು ಮಂದಿಗೆ ಅಮೃತ ಇಎನ್ಟಿ ಮತ್ತು ವೆರ್ಟಿಗೋ ಕ್ಲಿನಿಕ್, ಮಡಿಕೇರಿ, ಮತ್ತು ಕೊಡವ ಸಮಾಜ ಮಡಿಕೇರಿ ವತಿಯಿಂದ ನೀಡಲಾಗಿದೆ, ಈಗ ಲಸಿಕೆ ಅಭಿಯಾನವನ್ನು ಅಮೃತ ಇಎನ್ಟಿ ಮತ್ತು ವೆರ್ಟಿಗೋ ಕ್ಲಿನಿಕ್‌ನಲ್ಲಿ ಮುಂದುವರೆಸಲಾಗುತ್ತಿದೆ, ಯಾವ ದಾಖಲೆಗಳು ಇಲ್ಲದ ಕೂಲಿ ಕಾರ್ಮಿಕರು ತಮ್ಮ ಮಾಲಿಕರ ಗುರುತಿನ ಚೀಟಿಯ ಮೂಲಕ ಲಸಿಕೆ ಪಡೆಯಬಹುದು, ನಾವೆಲ್ಲರು ಕೈಜೋಡಿಸೋಣ ಮತ್ತು ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಸೋಲಿಸೋಣ ಮತ್ತು 3 ನೇ ಅಲೆಯನ್ನು ತಡೆಯೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ನಾಗರಿಕನಿಗೂ ಹೆಚ್ಚಿನ ರೀತಿಯಲ್ಲಿ ಮನವರಿಕೆಯಾಗಬೇಕು, ಮತ್ತು ನಿನ್ನೆ ನಡೆದ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಅವರ ಜಿಲ್ಲೆಯ ಭೇಟಿ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆದಿದ್ದರ ಬಗೆಗೆ ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕರಾದ ಮನೋಜ್ ಮಂದಪ್ಪ ಅವರು ಜಿಲ್ಲಾ ಪ್ರಕೋಷ್ಠದ ವತಿಯಿಂದ ನಿನ್ನೆ ಕೇಂದ್ರ ಕೃಷಿ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಸಚಿವರಿಗೆ ವಲಸೆ ಕಾರ್ಮಿಕರ ನೋಂದಣಿ ಆಗಬೇಕು ಮತ್ತು ಅವರ ಕೆಲಸದ ಅವಧಿ ವೇತನವನ್ನು ನಿಗದಿಪಡಿಸುವಂತೆ ಮನವಿ ಸಲ್ಲಿಸಿದರ ಬಗೆಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಕೊಡಗು ಜಿಲ್ಲಾ ವೃತ್ತಿ ಪ್ರಕೋಷ್ಠದ ಸಂಚಾಲಕರಾದ ಡಾಕ್ಟರ್ ಮೋಹನ್ ಅಪ್ಪಾಜಿ, ಸಂಚಾಲಕರಾದ ಮನೋಜ್ ಮಂದಪ್ಪ, ಮಡಿಕೇರಿ ನಗರ ಸಂಚಾಲಕರಾದ ರಾಜೇಶ್ ಪೂಳಕಂಡ, ಮಡಿಕೇರಿ ಮಂಡಲ ಸಂಚಾಲಕರಾದ ಮಂಡೆಪಂಡ ಗಣಪತಿ ಹಾಗೂ ವಿರಾಜಪೇಟೆ, ಸೋಮವಾರಪೇಟೆ ಸಂಚಾಲಕರು, ಸದಸ್ಯರು ಭಾಗವಹಿಸಿದರು.

error: Content is protected !!