fbpx

ಯಶಸ್ವಿಯಾಗಿ ಎರಡನೇ ದಿನವೂ ನಡೆದ ದಾಸರ ಪದ ಗೀತಗಾಯನ ಸಪ್ತಾಹ ಕಾರ್ಯಕ್ರಮ

ಮಡಿಕೇರಿ ಜು 2. ದಾಸ ಸಾಹಿತ್ಯ ಮನಕ್ಕೆ ತೃಪ್ತಿ ಕೊಡುವ ಸಾಹಿತ್ಯ ದಾಸರು ಸರಳವಾದ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಸಾಹಿತ್ಯ ಶತಮಾನಗಳು ಕಳೆದರೂ ಜೀವಂತವಾಗಿದೆ ಎಂದು ರಾಜಲಕ್ಷ್ಮಿ ಗೋಪಾಲಕೃಷ್ಣ ನುಡಿದರು. ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ ದಾಸರ ಪದ ಗೀತಗಾಯನ ಸಪ್ತಹದ ಎರಡನೇ ದಿನದ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಉಧ್ಘಾಟಿಸಿ ಮಾತನಾಡುತಿದ್ದರು.
ಮುಂದುವರಿದ ಅವರು ಕೊರೋನಾದ ಕ್ಲಿಷ್ಟಕರ ಸಮಯದಲ್ಲಿ ದಾಸರ ಪದ ಗೀತಗಾಯನ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮಾಡುತ್ತಿರುವ ಸಾಹಿತ್ಯ ಸೇವೆ ಅಭಿನಂದನಾರ್ಹ ಎಂದರು. ಪುರಂದರದಾಸರ ಅನುಭವದ ಅಡುಗೆಯ ಮಾಡಿ ಎನ್ನುವ ದಾಸರ ಪದ ಹಾಡಿ ಕಾರ್ಯಕ್ರಮ ಉದ್ಘಾಟಸಿದರು.

ತಮ್ಮ ಸಣ್ಣ ಪ್ರಾಯದಲ್ಲೇ ಸಂಗೀತ, ಗಮಕ ಅಭ್ಯಾಸ ಮಾಡಿದ್ದ ರಾಜಲಕ್ಷ್ಮಿ ಯವರಿಗೆ ಗಮಕಕ್ಕೆ ಪತಿ ಗೋಪಾಲಕೃಷ್ಣರೇ ಗುರು, ಇವರ ಇಬ್ಬರು ಪುತ್ರರು ಅನಂತಶಯನ, ಮತ್ತು ಚಿದ್ವಿಲಾಸ್ ಇಬ್ಬರೂ ಗಾಯಕರು, ಮಗಳು ಸಾಹಿತಿ ಆಶ ಹೆಗಡೆ.
ಆಕಾಶವಾಣಿಯಲ್ಲಿ ಇವರ ಚಿಂತನ ಆಗಾಗ ಬರುತ್ತಿರುತ್ತದೆ. ಅವರ ಪುಸ್ತಕ. ಕೊಡವ ಭಾಷೆಯಲ್ಲಿ ಮುದ್ರಣಗೊಂಡಿದೆ. ಆಧ್ಯಾತ್ಮ ಜೀವಿ. ಸೌಮ್ಯತೆ, ತಾಳ್ಮೆಗೆ ಹೆಸರು ರಾಜಲಕ್ಷ್ಮಿ.
ಕಾರ್ಯಕ್ರಮದಲ್ಲಿ 22 ಗಾಯಕರು ದಾಸರ ರಚಿಸಿದ ವಿವಿದ ಹಾಡುಗಳನ್ನು ಹಾಡಿದರು

ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ. ಪಿ. ಮಾತನಾಡುತ್ತಾ ದಾಸರ ಪದಗಳ ಕಾರ್ಯಕ್ರಮಕ್ಕೆ ಗಾಯಕರ ಅಭೂತಪೂರ್ವ ಬೆಂಬಲ ಬಂದಿದೆ. ಹನ್ನೆರಡನೇ ಶತಮಾನಕ್ಕೂ ಹಿಂದೆ ಸಾಹಿತ್ಯ ಕ್ಲಿಷ್ಟಕರವಾದ ಸಂಸ್ಕೃತ ಭಾಷೆಯಲ್ಲಿದ್ದು ಅದು ಜನ ಸಾಮಾನ್ಯರಿಗೆ ತಲುಪುತ್ತಲಿರಲಿಲ್ಲ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಬಂದ ನಂತರ ಅವು ಸುಲಭ ಕನ್ನಡದಲ್ಲಿ ಇದ್ದು ಎಲ್ಲರಿಗೂ ತಲುಪುವಂತಾಯಿತು.
ದಾಸ ಸಾಹಿತ್ಯದ ಗಾಯನದ ಜತೆಗೆ ಅದರ ಅರ್ಥ ಮತ್ತು ಅದರ ಒಳಹರವು ಅರ್ಥ ಮಾಡಿಕೊಂಡು ಅದರಲ್ಲಿರುವ ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ ಎಂದು ನುಡಿದರು.

ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ,ಬಳಗದ ಸಲಹೆಗಾರ ಟಿ.ಪಿ.ರಮೇಶ್, ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫ್ರಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ.ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ,ಬಿ.ಎನ್.ಮನುಶೆಣೈ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಕೆ.ಎಂ.ಶ್ವೇತ, ಬಿ.ಆರ್.ಜೋಯಪ್ಪ, ಡಾ. ದುರ್ಗಾ ಪ್ರಸಾದ್, ಮನೆ ಮನೆ ಕವಿಗೋಷ್ಟಿಯ ವೈಲೇಶ್, ಡಾ. ಕಾವೇರಿ ಪ್ರಕಾಶ್, ವಹಿದ್ ಜಾನ್, ಹಾತಿ ಜಯಪ್ರಕಾಶ್, ರಂಜಿತ್ ಕೆ.ಯು, ಪ್ರತಿಮಾ ರೈ, ಸಂಗೀತ ಮತ್ತು ನೃತ್ಯ ಶಿಕ್ಷಕರುಗಳಾದ ವಿ.ಟಿ ಶ್ರೀನಿವಾಸ್, ವತ್ಸಲಾ ನಾರಾಯಣ್, ಚಂದ್ರಕಲಾ ವಿಷ್ಣುಮೂರ್ತಿ, ರಾಜೇಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.
ನೂರಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿದ್ದು 300ಕ್ಕೂ ಹೆಚ್ಚು ಗಾನಪ್ರಿಯರು ವೀಕ್ಷಿಸಿದರು.
ಅದ್ಯಾಪಕರಾದ ಕೆ. ಯು. ರಂಜಿತ್ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಅಂಬೆಕಲ್ ನವೀನ್
ಬಳಗದ ಕೆ.ಎಂ ಶ್ವೇತಾ ಸ್ವಾಗತಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ ಕ್ರಾಸ್ತಾ ವಂದಿಸಿದರು.

error: Content is protected !!