fbpx

ಯಡವನಾಡು ಅರಣ್ಯ ಪ್ರದೇಶದಲ್ಲಿ ಬೀಜೋತ್ಸವ : “ಉತ್ತಮ ಭವಿಷ್ಯಕ್ಕಾಗಿ ಬೀಜೋತ್ಸವ


ಸೋಮವಾರಪೇಟೆ (ಕೊಡಗು ಜಿಲ್ಲೆ), ಜೂನ್ 11 : ಕರ್ನಾಟಕ ಅರಣ್ಯ ಇಲಾಖೆ ಕೊಡಗು ವೃತ್ತ, ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗ, ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವತಿಯಿಂದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಹಾಗೂ ಗ್ರಾಮ ಅರಣ್ಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ಜೂನ್ 10 ರಂದು) ಯಡವನಾಡು ಅರಣ್ಯ ಪ್ರದೇಶದಲ್ಲಿ ” ಬೀಜ ಬಿತ್ತೋಣ – ಅರಣ್ಯ ಬೆಳೆಸೋಣ” ಘೋಷಣೆಯಡಿ ಒಂದು ವಾರ ಕಾಲ ಹಮ್ಮಿಕೊಂಡಿದ್ದ
ಬಿತ್ತೋತ್ಸವ ಅಭಿಯಾನ : 2022 ನಡೆಯಿತು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಬೀಜ ಬಿತ್ತೋತ್ಸವ ಬಿತ್ತೋತ್ಸವದ ಮಹತ್ವ ಕುರಿತು ಸಾಮಾಜಿಕ ವಲಯ ಅರಣ್ಯಾಧಿಕಾರಿ ರವೀಂದ್ರ ತಿಳಿಸಿದರು.

ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೀಜ ಬಿತ್ತುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.
ಕರ್ನಾಟಕ ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ,ಡಿಆರ್ ಎಫ್ ಓ ಎಚ್. ಪ್ರೇಮಕುಮಾರ್ ಅರಣ್ಯ ರಕ್ಷಕರಾದ , ಫೈರೋಜ್ ಖಾನ್, ಶಾಲೆಯ ಮುಖ್ಯ ಶಿಕ್ಷಕಿ ಎಸ್.ಮಮತ, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕ ಟಿ.ಕೆ.ಬಸವರಾಜ್, ಶಿಕ್ಷಕರಾದ ನಿರ್ಮಲ, ವನಜ, ಲತಾಮಣಿ, ಗ್ರಾ.ಪಂ.ಸದಸ್ಯರಾದ ಜೋಯಪ್ಪ,
ಗೌರಮ್ಮ, ರವಿ, ರತ್ನಮ್ಮ, ಆಶ್ರಮ ಶಾಲೆಯ ಶಿಕ್ಷಕ ರಜನಿಕಾಂತ್, ಅರಣ್ಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಎಚ್.ಸಿ.ಗೋವಿಂದರಾಜ್,
“ಮರಮಿತ್ರ” ಯೋಜನೆಯ ಸ್ವಯಂ ಸೇವಕ ಟಿ.ವಿ.ಸಾಗರ್, ಸ್ಥಳೀಯರಾದ ರತ್ನಾವತಿ, ಚಂಗಪ್ಪ ಇತರರು ಇದ್ದರು.

error: Content is protected !!