ಮೌಲ್ಯಗಳ ಗೂಡು


ಮನದಾಳದ ಕ್ಷೋಬೆ ಕುಸಿದು
ಪ್ರೇಮವೆಂಬ ಹಕ್ಕಿಗಳು
ಗೂಡು ಕಟ್ಟಿವೆ
ಸದ್ದಿಲ್ಲದೆ ಕಡ್ಡಿ ಕೂಡಿಸಿ

ಸದ್ಭಾವ ವಿನಯಾದರ್ಶಗಳ
ಹತ್ತು ಹಲವು ಕಡ್ಡಿಗಳಿವೆ
ಆ ಗೂಡಿನಾಳದಲಿ

ನಿರ್ಜೀವ ಕಡ್ಡಿಗಳು
ವ್ಯಕ್ತಿತ್ವದ ಭಾರ ಹೊತ್ತು
ಪಿಸುಗುಟ್ಟು ನಗುತ್ತಿವೆ
ಈ ವ್ಯಕ್ತಿ ವ್ಯಕ್ತಿಯೇ
ಎಂಬ ಭಾವ ಸೂಚಕದಿಂದ !!

ಹ್ಹಾ… ಆ ವ್ಯಕ್ತಿ ವ್ಯಕ್ತಿಯಲ್ಲ !!
ಊರ್ಧ್ವ ಮುಖಿ ಕೀಳು
ಕರ್ಮಗಳ ತದ್ಭವ ರೂಪಿ
ಅದಕ್ಕೇ ಮೌಲ್ಯಗಳ ಗೂಡು
ಕಿಸಕ್ಕನೆ ನಗುತ್ತಿದೆ !!

ಗೂಡು ಕ್ರಮೇಣ ಬರಿದು !
ಅಂತಃಸತ್ವವನ್ನೇ ಅರಸಿ ಕಾದಿದ್ದ ಗೂಡು
ಈಗ ಕಾಲ ಗರ್ಭದಲ್ಲೂ ಕಾಲಿ
ದೇಹ ಮಣ್ಣಿಗಾಹುತಿ
ತುಚ್ಛ ದಾರಿ ಹಿಡಿದ ಮನು ಮೂರ್ತಿ
ಕರಾಳ ರಾತ್ರಿಯ ವೇಳೆ
ಸದ್ದಿಲ್ಲದೆ ಬರಿದು ಅಲುಗಾಡುತ್ತಿತ್ತು !

✒️ –ದೀಕ್ಷಿ ಪಟ್ಟಡ
error: Content is protected !!